ಮುಂಡಾಜೆ; ಕೃಷಿಕ ಶಾಜಿ ವಾಟೆಪ್ಪಿಳ್ಳಿಲ್ ಹೃದಯಾಘಾತದಿಂದ ನಿಧನ

    4
    0

    ಬೆಳ್ತಂಗಡಿ; ಮುಂಡಾಜೆ ಗ್ರಾಮದ ಕುರುಡ್ಯ ನಿವಾಸಿ, ಪ್ರಗತಿಪರ ಕೃಷಿಕ ಸರಳ ಸಜ್ಜನಿಕೆಯ ಸ್ನೇಹ ಜೀವಿಯಾಗಿದ್ದ ಶಾಜಿ ವಾಟೆಪ್ಪಿಳ್ಳಿಲ್ (62ವ.)ಅವರು ಹೃದಯಾಘಾತದಿಂದ ಜೂ.12 ರಂದು ಸ್ವಗೃಹ ದಲ್ಲಿ ನಿಧನರಾಗಿದ್ದಾರೆ.
    ಮಗ ಆಸ್ಪತ್ರೆಯಲ್ಲಿದ್ದುದರಿಂದ ಪತ್ನಿ ಅಲ್ಲಿಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಒಬ್ಬರೇ ಇದ್ದವರು ಕುಸಿದುಬಿದ್ದು ಮೃತಪಟ್ಟಿದ್ದಾರೆ. ಮೃತರು ತಂದೆ ಮ್ಯಾಥ್ಯೂ ವಾಟೆಪ್ಪಿಳ್ಳಿಲ್, ತಾಯಿ ಲೀಲಾಮ್ಮ, ಪತ್ನಿ ಶೇರ್ಲಿ ಶಾಜಿ ಮಕ್ಕಳಾದ ಅಲೆನ್ ಶಾಜಿ ಮತ್ತು ಆಲ್ಫಿ ಶಾಜಿ, ಸಹೋದರ ಸಹೋದರಿಯರಾದ ಸಿಲ್ವಿ, ರಾಯ್ ಮ್ಯಾಥ್ಯೂ, ಜೋಬಿ ಮ್ಯಾಥ್ಯೂ ಮತ್ತು ಸಜಿತ್ ಮ್ಯಾಥ್ಯೂ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ವಿದೇಶದಲ್ಲಿರುವ ಪುತ್ರ ಆಗಮಿಸಿದ ಬಳಿಕ ದಿನಾಂಕ ಜೂ.14 ರಂದು ಮಧ್ಯಾಹ್ನ 2 ಗಂಟೆಗೆ
    ಮೃತರ ಅಂತ್ಯ ಸಂಸ್ಕಾರ ವಿಧಿಗಳು ಮುಂಡಾಜೆ ಸೈಂಟ್ ಮೇರಿ ಚರ್ಚ್‌ನಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

    LEAVE A REPLY

    Please enter your comment!
    Please enter your name here