Home ರಾಜಕೀಯ ಸಮಾಚಾರ ಬೆಳ್ತಂಗಡಿಯಲ್ಲಿ ನೂತನ ನ್ಯಾಯಾಲಯ ಕಟ್ಟಡಕ್ಕೆ ಅನುದಾನ ಒದಗಿಸುವಲ್ಲಿ ಸಹಕರಿಸಿದ ರಕ್ಷೀತ್ ಶಿವರಾಮ್ ರವರಿಗೆ ಅಭಿನಂದನೆಗಳು: ಸಂತೋಷ್...

ಬೆಳ್ತಂಗಡಿಯಲ್ಲಿ ನೂತನ ನ್ಯಾಯಾಲಯ ಕಟ್ಟಡಕ್ಕೆ ಅನುದಾನ ಒದಗಿಸುವಲ್ಲಿ ಸಹಕರಿಸಿದ ರಕ್ಷೀತ್ ಶಿವರಾಮ್ ರವರಿಗೆ ಅಭಿನಂದನೆಗಳು: ಸಂತೋಷ್ ಕುಮಾರ್ ಲಾಯಿಲ

2
0

ಬೆಳ್ತಂಗಡಿ : ನೂತನ ಬೆಳ್ತಂಗಡಿ ನ್ಯಾಯಾಲಯದ ಕಟ್ಟಡ 23 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ಈಗಾಗಲೇ ರಾಜ್ಯ ಸರ್ಕಾರ ಮೊದಲ ಹಂತದ ಕಾಮಗಾರಿಗೆ 9 ಕೋಟಿ ರೂ ಅನುದಾನ ಮಂಜೂರು ಮಾಡಿದೆ. ಹಲವು ವರ್ಷಗಳಿಂದ ನ್ಯಾಯವಾದಿಗಳ ಸಂಘ ಹಾಗೂ ಸಾರ್ವಜನಿಕರು ಸಲ್ಲಿಸುತ್ತಿದ್ದ ಬೇಡಿಕೆಗೆ ಇದೀಗ ರಾಜ್ಯ ಸರಕಾರದಿಂದ ಸ್ಪಂದನೆ ದೊರೆತಿದ್ದು, ದಿನಾಂಕ 14-06-2026 ರಂದು ಬೆಳ್ತಂಗಡಿ ನೂತನ ನ್ಯಾಯಾಲಯದ ಶಂಕ್ಷಾಪಣೆಯಾಗಲಿದ್ದು ಬಹುಕಾಲದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.

ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕಾಗಿ ಬೆಳ್ತಂಗಡಿ ವಕೀಲರ ಸಂಘ ಕಳೆದ 10-12 ವರ್ಷಗಳಿಂದ ನಿರಂತರವಾಗಿ ಈ ಹಿಂದಿನ ಸರ್ಕಾರಗಳ ಗಮನ ಸೆಳೆಯುತ್ತಾ ಬಂದಿದೆ.

ಈ ಕುರಿತು ಹಿಂದಿನ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಕಾನೂನು ಸಚಿವರಾದ ಎಚ್.ಕೆ. ಪಾಟೀಲ್, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ ಬಳಿ ವಕೀಲರ ನಿಯೋಗವನ್ನು ಕರಕೊಂಡು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಮ್ ಇವರು ಮನವಿಗಳನ್ನು ನೀಡಿದ್ದರ ಫಲವಾಗಿ ರಾಜ್ಯ ಸರಕಾರದಿಂದ ಅನುಧಾನವನ್ನು ಒದಗಿಸಿರುವುದರಲ್ಲಿ ಸಫಲರಾದ ರಕ್ಷಿತ್ ಶಿವರಾಮ್ ಅವರಿಗೆ ಜಿಲ್ಲಾ ಕೆ.ಡಿ.ಪಿ ಸದಸ್ಯನಾಗಿ ಮತ್ತು ಬೆಳ್ತಂಗಡಿ ವಕೀಲರ ಸಂಘದ ಸದಸ್ಯನಾಗಿ ಹೃತ್ತೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಸಂತೋಷ್ ಕುಮಾರ್ ಲಾಯಿಲ ತಿಳಿಸಿರತ್ತಾರೆ.

ಅಲ್ಲದೆ ವಿಧಾನಪರಿಷತ್ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್ ಹಾಗೂ ಐವನ್ ಡಿಸೋಜ ಅವರು ವಿಧಾನಮಂಡಲ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದದ್ದಾಕ್ಕಾಗಿ ಅಬಿನಂದಿಸುತ್ತೇನೆ ಎಂದು ಜೂನ್ 9 ರಂದು ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here