Home ಅಪರಾಧ ಲೋಕ ಬೆಳ್ತಂಗಡಿ; ಅನಿತಾ ಕಾಸರಗೋಡು ವಿರುದ್ದ ಗುರುನಾರಾಯಣ ಸೇವಾ ಸಂಘದಿಂದ ಪೊಲೀಸರಿಗೆ ದೂರು

ಬೆಳ್ತಂಗಡಿ; ಅನಿತಾ ಕಾಸರಗೋಡು ವಿರುದ್ದ ಗುರುನಾರಾಯಣ ಸೇವಾ ಸಂಘದಿಂದ ಪೊಲೀಸರಿಗೆ ದೂರು

0
2

ಬೆಳ್ತಂಗಡಿ : ಬಿಲ್ಲವ ಸಮಾಜಕ್ಕೆ ಅಶ್ಲೀಲ ಪದಗಳಿಂದ ಅವಹೇಳನಗೈದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಅನಿತಾ ಕಾಸರಗೋಡು ವಿರುದ್ಧ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಸೋಮವಾರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು.

ಅನಿತಾ ಕಾಸರಗೋಡು ಎಂಬ ಖಾತೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ “ಪೂಜಾರಿಗಳು ಮತ್ತು ಶೆಟ್ಟಿಗಳು ಎಂಬ ಜಾತಿಯ ಹೆಸರಿನ ಪದಗಳನ್ನು ಬಳಸಿ” ಅಶ್ಲೀಲವಾಗಿ ನಿಂದಿಸಿದ್ದಾರೆಂದು ಆರೋಪಿಸಲಾಗಿದೆ. ಅನಿತಾ ಕಾಸರಗೋಡು ವಿರುದ್ಧ ಕಾನೂನಾತ್ಮಕವಾದ ಕ್ರಮವನ್ನು ಕೈಗೊಳ್ಳಬೇಕು, ಇಲ್ಲದೇ ಇದ್ದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಹೋರಾಟವನ್ನು ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪುರವರು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಸದಸ್ಯರು ಇದ್ದರು.

NO COMMENTS

LEAVE A REPLY

Please enter your comment!
Please enter your name here