Home ಅಪರಾಧ ಲೋಕ ಅಕ್ರಮ ದನಸಾಗಾಟ ಧರ್ಮಸ್ಥಳ ಪೊಲೀಸರ ಕಾರ್ಯಾಚರಣೆ ದನ ರಕ್ಷಣೆ ನಾಲ್ವರ ವಿರುದ್ದ ಪ್ರಕರಣ‌ದಾಖಲು

ಅಕ್ರಮ ದನಸಾಗಾಟ ಧರ್ಮಸ್ಥಳ ಪೊಲೀಸರ ಕಾರ್ಯಾಚರಣೆ ದನ ರಕ್ಷಣೆ ನಾಲ್ವರ ವಿರುದ್ದ ಪ್ರಕರಣ‌ದಾಖಲು

0

ಬೆಳ್ತಂಗಡಿ; ಸ್ಥಳೀಯರೊಬ್ಬರಿಂದ ದನವನವನ್ನು ಖರೀದಿಸಿ ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಧರ್ಮಸ್ಥಳ ಪೊಲೀಸರು ಪತ್ತೆಹಚ್ಚಿದ್ದು ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಪಿಕಪ್ ವಾಹನ ಹಾಗೂ ದನವನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರ ವಿರುದ್ದ ಪ್ರಕರಣ ದಾಖಲಿಸಿಕೊಂಳ್ಳಲಾಗಿದೆ.
ಕಕ್ಕಿಂಜೆ ನಿವಾಸಿ ಅನಿಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ಪ್ರಕರಣದಲ್ಲಿ ದನಸಾಗಾಟ ಮಾಡುತ್ತಿದ್ದ ತೋಮಸ್ ತೋಟತ್ತಾಡಿ ಹಾಗೂ ಕಬೀರ ಎಂಬವರ ವಿರುದ್ದ ಹಾಗೂ ವಧೆ ಮಾಡಲು ದನ ಮಾರಾಟ ಮಾಡಿದ ಕಾನರ್ಪ ರಾಘವೇಂದ್ರ ಭಟ್ ಎಂಬಾತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಘಟನೆಯ ವಿವರ;
ಬುಧವಾರ ರಾತ್ರಿಯ ವೇಳೆ ಅಕ್ರಮ ದನಸಾಗಾಟ ನಡೆಯುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಧರ್ಮಸ್ಥಳ ಪೊಲೀಸರು ಸೋಮಂದಡ್ಕಕ್ಕೆ   ತೆರಳಿದಾಗ ಪಿಕಪ್ ವಾಹನದಲ್ಲಿ ದನಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಪೊಲೀಸರನ್ನು ನೋಡಿ ವಾಹನದಲ್ಲಿದ್ದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಬಳಿಕ ಪರಿಶೀಲನೆ ನಡೆಸಿದಾಗ ಸೋಮಂದಡ್ಕ ಬಸ್ ನಿಲ್ದಾಣದ ಸಮೀಪ ಅವಿತು ಕುಳಿತಿದ್ದ ಅನಿಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ಕಕ್ಕಿಂಜೆಯ ತೋಮಸ್, ಹಾಗೂ ಕಬೀರ್ ಎಂಬಾತನೊಂದಿಗೆ ಸೇರಿ ಕಾನರ್ಪ ರಾಘವೇಂದ್ರ ಭಟ್ ಎಂಬವರಿಂದ ದನವನ್ನು ಮಾಂಸಕ್ಕಾಗಿ ಖರೀದಿಸಿ ಮಾಂಸ ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದು ದನ ಖರೀದಿ ಹಾಗೂ ಸಾಗಾಟ ಮಾಡಲು ಯಾವುದೇ ಪರವಾನಿಗೆ ಪಡೆಯದಿಲ್ಲ ಎಂದು ತಿಳಿಸಿದ್ದು ಪಿಕಪ್ ವಾಹನ ಹಾಗೂ ದನವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version