ಬೆಳ್ತಂಗಡಿ; 10 ವರ್ಷ ಕಾಲ ಕೇರಳಂ ರಾಜ್ಯದ ಮುಖ್ಯಮಂತ್ರಿಯಾಗಿ ಗೌರವಯುತವಾಗಿ ಅಧಿಕಾರದಿಂದ ಕೆಳಗಿಳಿದ ಕಾಮ್ರೇಡ್ ಪಿನರಾಯ್ ವಿಜಯನ್ ಅವರ ಮನೆಗೆ ಸರ್ವಾದಿಕಾರಿಯಗಿ, ರಾಜಕೀಯ ಪ್ರೇರಿತವಾಗಿ ಮತ್ತು ಅನಗತ್ಯವಾಗಿ ಅವಮಾನಿಸುವ ಏಕೈಕ ದುರುದ್ದೇಶದಿಂದ ಇಡಿ (ಜಾರಿ ನಿರ್ಧೇಶನಾಲಯ) ಮೂಲಕ ದಾಳಿ ಮಾಡಿಸಿರುದು ಕೇಂದ್ರ ಸರಕಾರದ ರಾಜಕೀಯ ದಿವಾಳಿತನ ಎಂದು ಸಿಪಿಐಎಂ ಭಾವಿಸುತ್ತದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಹಾಗೂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.
ಅವರು ಇಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ವಿರೋದ ಪಕ್ಷದವರ ಮನೆಗಳಗೆ ಇಡಿ (ಜಾರಿ ನಿರ್ಧೇಶನಾಲಯ) ಅಧಿಕಾರಿಗಳನ್ನು ಕಳುಹಿಸಿ ವಿರೋದ ಪಕ್ಷಗಳನ್ನು ನಾಶ ಮಾಡಲು ಹೊರಟ ಕೇಂದ್ರ ಸರಕಾರದ ಅಮಾನವೀಯ ನಡೆಯನ್ನು ಖಂಡಿಸಿ ನಡೆಸಿದ ಹೋರಾಟವನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು. ಕಮ್ಯೂನಿಸ್ಟರ ಪ್ರಮಾಣಿಕತೆ ನಡೆ, ಸರಳ ಬದುಕು ನಿಷ್ಟಾವಂತ ರಾಜಕಾರಣ ದೇಶದ ಇತಿಹಾಸ. ಇತಿಹಾಸವನ್ನೇ ಅರಿಯದ ಈ ಬಿಜೆಪಿಗರು ಅಜ್ಞಾನಿಗಳಂತೆ ವ್ಯವಹರಿಸುವುದನ್ನು ದೇಶದಲ್ಲಿಂದು ನಾವು ಕಾಣುತ್ತೇವೆ ಎಂದರು. ಶ್ರೀ ನರೇಂದ್ರ ಮೋದಿಯವರ ತರ ಗಂಟೆಗೊಂದು ಬಟ್ಟೆಯಾಗಲಿ, ಲಕ್ಷಾಂತರ ರೂಪಾಯಿಯ ಆಹಾರವಾಗಲಿ ಸೇವಿಸದ ಕಮ್ಯೂನಿಸ್ಟರು ಪಕ್ಷ ಬಾಡಿಗೆ ಕೊಟ್ಟು ನೀಡುವ ಬಾಡಿಗೆ ಮನೆಯಲ್ಲಿ ವಾಸ ಇದ್ದು ಜನಸೇವೆ ಮಾಡುವವರು. ಕಮ್ಯೂನಿಸ್ಟರ ಜನಪರ ಆಡಳಿತದಿಂದ ಪಾಠ ಕಲಿಯದ ಕೇಂದ್ರದ ಬೀಜೆಪಿ ಸರಕಾರ ಇಡಿ, ಸಿಬಿಐ ಮೊದಲಾದ ಇಲಾಖಗೆಳನ್ನು ತನ್ನ ಪಕ್ಷದ ಕೆಲಸದಾಳುಗಳಂತೆ ನಡೆಸಿಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ, ಸಂವಿಧಾನಕ್ಕೆ ಮತ್ತು ದೇಶಕ್ಕೆ ಮಾಡುವ ದ್ರೋಹವಾಗಿದೆ. ಇದು ಬಿಜೆಪಿ ಪಕ್ಷವು ನಮ್ಮ ಸಂವಿಧಾನ ಬದ್ದ ಇಲಾಖೆಗೆ ಮತ್ತು ಇಲಾಖಾ ಅಧಿಕಾರಿಗಳಿಗೂ ಮಾಡುವ ಅವಮಾನ ಕೂಡಾ ಆಗಿದೆ. ವಿರೋದ ಪಕ್ಷದ ನಾಯಕರುಗಳ ಮನೆಗೆ ಇಡಿ ಕಳುಹಿಸಿ ಅವರನ್ನು ಬೆದರಿಸಿ ತರುವಾಯ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ಬೆಳೆಸುವ ನರೇಂದ್ರ ಮೋದಿ ಮತ್ತು ಅಮಿತ್‌ಶಾ ಜೋಡಿಯ ಅಪ್ರಮಾಣಿಕ, ಅಸಹ್ಯ, ಸರ್ವಾದಿಕಾರಿ ರಾಜಕೀಯವನ್ನು ನಾವು ಖಂಡಿಸಬೇಕಾಗುತ್ತದೆ. ಈ ರೀತಿ ವಿರೋದ ಪಕ್ಷದ ಭೃಷ್ಟರನ್ನೆಲ್ಲ ತನ್ನ ಪಕ್ಷಕ್ಕೆ ಸೇರಿಸಿಕೊಂಡು ಅತಿ ದೊಡ್ಡ ಭೃಷ್ಟರ ಪಕ್ಷ ಬಿಜೆಪಿ ಪಕ್ಷ ಎಂಬAತಾಗಿದೆ ಎಂದು ಅವರು ಟೀಕಿಸಿದರು. ಬಿಜೆಪಿ ಪಕ್ಷದವರು ಯಾರೂ ಭೃಷ್ಟಾಚಾರಿಗಳಿದ್ದರೂ ಅವರ ಮನೆಗೆ ಹೋಗದ ಇಡಿ ವಿರೋದ ಪಕ್ಷಗಳ ಮನೆಗೆ ಮಾತ್ರಾ ಕಳುಹಿಸುವ ಹೊಲಸು ರಾಜಕೀಯ ಬಿಜೆಪಿಯದ್ದಾಗಿದೆ ಎಂದರು.
ಮೊದಲು ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಈಶ್ವರಿ ಅವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತಾಡಿದರು. ಕೊನೆಗೆ ಸಿಪಿಐಎಂ ತಾಲೂಕು ಸಮಿತಿ ಸದಸ್ಯೆ ಜಯಶ್ರೀ ವಂದಿಸಿರು. ಕಾರ್ಯಕ್ರಮದಲ್ಲಿ ತಾಲೂಕು ಸಮಿತಿ ಸದಸ್ಯರಾದ ಸುಕುಮಾರ್, ಡಿವೈಎಫ್.ಐ. ತಾಲೂಕು ಅಧ್ಯಕ್ಷರಾದ ಅಧಿತಿ, ಕಾರ್ಯದರ್ಶಿಯಾದ ಅಭಿಷೇಕ್, ಎಸ್.ಫ್.ಐ. ಜಿಲ್ಲಾ ಕಾರ್ಯದರ್ಶಿ ವಿನುಶರಮಣ, ಮುಖಂಡರುಗಳಾದ ಪುಷ್ಪ, ಅಶ್ವಿತ, ಅಪ್ಪಿ, ಕುಮಾರಿ, ಶ್ರೇಯ, ದಾಮೋದರ. ಕುಸುಮ, ನವೀಲ ಮೊದಲಾದವರಿದ್ದರು.










