ಬೆಳ್ತಂಗಡಿ; ಯಕ್ಷಗಾನ ಕಲಾವಿದ ದಿನೇಶ್ ಕೊಡಪದವು ರವರ ತಾಯಿ ಲೀಲಾವತಿ ಯವರು ಸಲ್ಲಿಸಿದ್ದ ದೂರಿನ ಮೇಲಿನ ಬಂಧನದ ಬೀತಿಯಲ್ಲಿದ್ದ
ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಉಚ್ಚನ್ಯಾಯಾಲಯ ಮಹೇಶ್ ಶೆಟ್ಟಿ ತಿಮರೋಡಿ ಅವರ ಮಾತಿನ ಬಗ್ಗೆ ಕಟುವಾದ ಟೀಕೆ ಮಾಡಿದ್ದು ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ
ಶ್ರೀ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಮಹೇಶ್ ತಿಮರೋಡಿ ಆಡಿಯೋ ದಲ್ಲಿ ಆಡಿದ ಮಾತುಗಳ ಬಗ್ಗೆ ಉಲ್ಲೇಖಿಸಿ ಅದರ ಬಗ್ಗೆ ಕಠಿಣ ಪದಗಳಲ್ಲಿ ಉಲ್ಲೇಖ ಮಾಡಿರುವ ನ್ಯಾಯಲಯ.
ವಾರಕ್ಕೊಮ್ಮೆ ಪುತ್ತೂರು ಪೋಲೀಸ್ ಠಾಣೆ ಯಲ್ಲಿ ಹಾಜರಾಗಿ ಸಹಿ ಮಾಡುವಂತೆ ಹಾಗೂ ತನಿಖೆಗೆ ಸಹಕರಿಸುವಂತದ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ.
