Home ಸ್ಥಳೀಯ ಸಮಾಚಾರ ರೆಖ್ಯ ಯುವಕ ನಾಪತ್ತೆ ಪ್ರಕರಣ; ಮೂರು ದಿನಗಳ ಬಳಿಕ ಶಿರಾಡಿ ಹೊಳೆ ಬದಿಯಲ್ಲಿ ಪತ್ತೆ; ಶೌರ್ಯ...

ರೆಖ್ಯ ಯುವಕ ನಾಪತ್ತೆ ಪ್ರಕರಣ; ಮೂರು ದಿನಗಳ ಬಳಿಕ ಶಿರಾಡಿ ಹೊಳೆ ಬದಿಯಲ್ಲಿ ಪತ್ತೆ; ಶೌರ್ಯ ವಿಪತ್ತು  ನಿರ್ವಹಣಾ ತಂಡದ ಕಾರ್ಯಾಚರಣೆ

7
0

ಬೆಳ್ತಂಗಡಿ, ರೆಖ್ಯ ಗ್ರಾಮದ ದೇವಸ ಎಂಬಲ್ಲಿಗೆ ಸಂಬಂಧಿಕರ ಮನೆಗೆ ಆಗಮಿಸಿದ್ದ ನೆಲ್ಯಾಡಿ ಪಾಲೇತ್ತಾಡಿ ನಿವಾಸಿ ಅಶ್ವಿತ್ ಕುಮಾರ್ (37) ಅವರು ಮೇ 17 ರಂದು ಸಂಜೆ 4.15 ರ ಬಳಿಕ ಕಣ್ಮರೆಯಾಗಿದ್ದರು ಶೌರ್ಯ ವಿಪತ್ತು ನುರ್ವಹಣಾ ತಂಡದವರು ಹಾಗೂ ಸ್ಥಳೀಯರು‌ ನಡೆಸಿದ   ನಿರಂತರ ಹುಡುಕಾಟದ ಬಳಿಕ ಶಿರಾಡಿ ಗ್ರಾಮದ ಕುಕ್ಕುಂಜ ಸಮೀಪದ ಉದನೆ ಹೊಳೆಯ ಸಮೀಪದಲ್ಲಿ ಮೇ 19 ಮಂಗಳವಾರ ಮಧ್ಯಾಹ್ನ  ವೇಳೆಗೆ ನಿತ್ರಾಣವಾಗಿ ಕುಳಿತಿದ್ದ ಅಶ್ವಿತ್ ಕುಮಾರ್ ಅವರನ್ನು ಪತ್ತೆಹಚ್ಚಿದ್ದಾರೆ.

ಯುವಕ ನಾಪತ್ತೆಯಾದ ಬಳಿಕ ಸುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಸಿಗದೇ ಇದ್ದಾಗ ಆತಂಕಗೊಂಡ ಕುಟುಂಬದವರು ಪತ್ತೆ ಕಾರ್ಯಕ್ಕೆ ಪೊಲೀಸರಿಗೆ ದೂರು ನೀಡಿದ್ದರು ಹಾಗೂ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸಹಕಾರ ಕೇಳಿದ್ದರು. ಕೂಡಲೇ ಸ್ಪಂದಿಸಿದ ಶಿಶಿಲ ಅರಶಿನಮಕ್ಕಿ ಘಟಕದ ಸ್ವಯಂಸೇವಕರು ಹುಡುಕಾಟ ನಡೆಸಿದ್ದರು. ನಾಪತ್ತೆಯಾಗಿದ್ದ ಮಾರನೆಯ ದಿನ ಶೌರ್ಯ ತಂಡದ ಸ್ವಯಂಸೇವಕರು ಮತ್ತು ಸ್ಥಳೀಯರು ಸುತ್ತಲಿನ ಅರಣ್ಯ ಪ್ರದೇಶ, ನದಿ, ಗುಡ್ಡಗಾಡು, ಕೆರೆ ಮತ್ತಿತರ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಹುಡುಕಿದರೂ ಪತ್ತೆಯಾಗಿರಲಿಲ್ಲ.

ಕಾಣೆಯಾಗಿ ಇಂದು (19.05.2026) 3 ನೇ ದಿನವಾಗಿದ್ದು “ಶೌರ್ಯ” ತಂಡದ ಸದಸ್ಯರು, ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಸದಸ್ಯರು ಹಾಗೂ
ಸ್ಥಳೀಯರು ಬೆಳಿಗ್ಗೆಯಿಂದಲೇ ಹುಡುಕುವ ಕಾರ್ಯಾಚರಣೆ ನಡೆಸಿದ್ದರು.

ಶಿರಾಡಿ ಗ್ರಾಮದ ಕುಕ್ಕುಂಜ ಸಮೀಪದ ಉದನೆ ಹೊಳೆಯ ಸಮೀಪದಲ್ಲಿ ಇಂದು ಮಧ್ಯಾಹ್ನ ಸುಮಾರು 2.15 ರ ವೇಳೆಗೆ ನಿತ್ರಾಣವಾಗಿ ಕುಳಿತಿದ್ದ ಅಶ್ವಿತ್ ಕುಮಾರ್ ಅವರನ್ನು ಯುವಕರು ಪತ್ತೆಹಚ್ಚಿದ್ದಾರೆ.

ಎರಡು ದಿನದ ಬಳಿಕ ದೊರೆತ ಅಶ್ವಿನ್ ಅವರು ನಿತ್ರಾಣಗೊಂಡಿದ್ದು ಅವರನ್ನು ಸ್ಥಳೀಯರು ಹಾಗೂ ಶೌರ್ಯ ತಂಡದ ಸದಸ್ಯರು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

ಎರಡು ದಿನಗಳ ಹುಡುಕಾಟ ನಡೆಸಲು ಶ್ರಮಿಸಿದ ಸ್ವಯಂಸೇವಕರಿಗೆ ಅಶ್ವಿನ್ ಕುಮಾರ್ ಅವರ ಕುಟುಂಬದ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್ ರವರು ಸ್ವಯಂಸೇವಕರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ವಯಂಸೇವಕರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ ಇವರ ನೇತ್ರತ್ವದಲ್ಲಿ ಶಿಶಿಲ ಅರಶಿನಮಕ್ಕಿ ಘಟಕದ ಸ್ವಯಂಸೇವಕರು ಯಶಸ್ವೀ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಶ್ರೀ ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಘಟಕ ಪ್ರತಿನಿಧಿ ಸುಲೈಮಾನ್, ರವೀಂದ್ರ, ಘಟಕ ಸಂಯೋಜಕಿ ರಶ್ಮಿತಾ ಹಾಗೂ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here