Home ಅಪರಾಧ ಲೋಕ ಬೆಳ್ತಂಗಡಿ : ಶಿಬಾಜೆಯ ಶ್ರೀಧರ ಕೊಲೆ ಪ್ರಕರಣ; ಮಂಪರು ಪರೀಕ್ಷೆ ಹಾಗೂ ಬ್ರೈನ್ ಮ್ಯಾಪಿಂಗ್ ಗೆ...

ಬೆಳ್ತಂಗಡಿ : ಶಿಬಾಜೆಯ ಶ್ರೀಧರ ಕೊಲೆ ಪ್ರಕರಣ; ಮಂಪರು ಪರೀಕ್ಷೆ ಹಾಗೂ ಬ್ರೈನ್ ಮ್ಯಾಪಿಂಗ್ ಗೆ ಆರೋಪಿಗಳ ನಕಾರ

2
0

ಬೆಳ್ತಂಗಡಿ: ಶಿಬಾಜೆ ಗ್ರಾಮದಲ್ಲಿ 2022ರ ಡಿಸೆಂಬರ್ 18 ರಂದು ನಡೆದ ಶ್ರೀಧರ ಕೊಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸರಕಾರ ಪ್ರಕರಣವನ್ನು ಎಸ್‌ಐಟಿಗೆ ನೀಡಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಆರೋಪಿಗಳು ಮಂಪರು ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್‌ಗೆ ಆರಂಭದಲ್ಲಿ ಒಪ್ಪಿಗೆ ಸೂಚಿಸಿ ಬಳಿಕ ನ್ಯಾಯಾಲಯದ ಮುಂದೆ ನಿರಾಕರಿಸಿರುವ ಬಗ್ಗೆ ವರದಿಯಾಗಿದೆ.

ಶ್ರೀಧರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ವಿಚಾರಣೆ ನಡೆಸುತ್ತಿದ್ದು ಆರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಎಲ್.ಆನಂದ್ ಗೌಡ, ಮಹೇಶ್‌ನ ನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಎಸ್‌ಐಟಿ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯದ ಮುಂದೆ ಮಂಪರು ಪರೀಕ್ಷೆಗೆ ಒಳಪಡಲ್ಲ ಎಂದಿದ್ದಾರೆ. ಈ ಮೊದಲು ಎಸ್‌ಐಟಿ ಬಳಿ ಮಂಪರು ಪರೀಕ್ಷೆಗೆ ಒಪ್ಪಿಕೊಂಡಿದ್ದ ನಾಲ್ವರು ಆರೋಪಿ ಇದೀಗ ಕೋರ್ಟ್ ನಲ್ಲಿ ನಕಾರ ಮಾಡಿದ್ದಾರೆ.

ಈ ಪ್ರಕರಣದ ಉನ್ನತ ತನಿಖೆಗಾಗಿ 2026 ಫೆ.20 ರಂದು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಬೆಂಗಳೂರು ಕೇಂದ್ರ ವಲಯ ಐಜಿಪಿ ಲಾಬೂರಾಮ್, ಉಡುಪಿ ಎಸ್ಪಿ ಹರಿರಾಮ್ ಶಂಕರ್, ಡಿವೈಎಸ್ಪಿ ಹರೀಶ್ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗಿತ್ತು. ಶಿಬಾಜೆಯ ಎ.ಸಿ.ಕುರಿಯನ್ ಮಾಲೀಕತ್ವದ ತೋಟದಲ್ಲಿ ಶ್ರೀಧರ ಮೇಲ್ವಿಚಾರಕಾರಗಿದ್ದರು. 2022ರ ಡಿ.17 ರಂದು ಸಂಜೆ 5:30 ಕ್ಕೆ ಪರಿಚಯಸ್ಥರಿಂದ ಶ್ರೀಧರ ಮೇಲೆ ಹಲ್ಲೆ ನಡೆದಿತ್ತು, ಮರುದಿನ ಡಿ.18ರಂದು ಶ್ರೀಧರ ಬೆತ್ತಲಾಗಿ ಕೊಲೆಯಾಗಿದ್ದ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಘಟನೆಯನ್ನು ಸಿಐಡಿ ತನಿಖೆ ನಡೆಸಿ ಆರೋಪಿಗಳು ನಿರ್ದೋಷಿಗಳು ಎಂದು ವರದಿ ನೀಡಿತ್ತು. ಹೈಕೋರ್ಟ್ ಸೂಚನೆಯಂತೆ ಮತ್ತೆ ಸರಕಾರ ಎಸ್ಐಟಿ ತನಿಖೆಗೆ ಆದೇಶ ಮಾಡಿತ್ತು.

LEAVE A REPLY

Please enter your comment!
Please enter your name here