Home ಅಪರಾಧ ಲೋಕ ಬೆಳ್ತಂಗಡಿ; ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಕಳ್ಳತನ; ಚಿನ್ನಾಭರಣ ನಗದು ಕಳವು

ಬೆಳ್ತಂಗಡಿ; ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಕಳ್ಳತನ; ಚಿನ್ನಾಭರಣ ನಗದು ಕಳವು

0

ಬೆಳ್ತಂಗಡಿ: ಪದ್ಮುಂಜದ ಗಾಡಕೋಡಿ ಎಂಬಲ್ಲಿಯ ಬೆಳ್ತಂಗಡಿ ಪೋಲೀಸ್ ಸಿಬ್ಬಂದಿ ಕರುಣಾಕರ ಗೌಡ ಎಂಬವರ ಮನೆಯಲ್ಲಿ ಮೇ 15 ರಂದು ರಾತ್ರಿ ಕಳವಾಗಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸುಮಾರು 13 ಲಕ್ಷ ರೂಪಾಯಿ ವೆಚ್ಚದ ಚಿಣ್ಣಾಭರಣ ಒಂದು ಲಕ್ಷ ರೂಪಾಯಿ ನಗದು ಕಳುವಾಗಿದೆ ಎಂದು ದೂರು ನೀಡಿಲಾಗಿದೆ . ಮನೆಯ ಒಡೆಯ ಕರುಣಾಕರ ಮನೆಯಲ್ಲಿ ಒಬ್ಬರೇ ಇದ್ದು ಪತ್ನಿ ಮಕ್ಕಳು ಬೆಂಗಳೂರಿನಲ್ಲಿ ಇದ್ದರು ಎಂದು ತಿಳಿದುಬಂದಿದೆ.

ಕರುಣಾಕರ ರಾತ್ರಿ ಒಂದು ಗಂಟೆಯವರೆಗೂ ಎಚ್ಚರಿಕೆಯಲ್ಲಿದ್ದು ಬೆಳಿಗ್ಗೆ ಏಳುವರೆಗಂಟೆಗೆದ್ದು ನೋಡುವಾಗ ಬಾಗಿಲಿನ ಚಿಲಕ ತೆರೆದಿರುವುನ್ನು ನೋಡಿ ಸಂಶಯಗೊಂಡ ಕರುಣಾಕರ ಗೌಡರು ಪರಿಶೀಲಿಸಿದಾಗ ಮನೆಯೊಳಗೆ ಕಳವಾಗಿರುವುದು ತಿಳಿದುಬಂದಿದೆ.

ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ ಠಾಣಾಧಿಕಾರಿ ಕೌಶಿಕ್ ಬಿ ಸಿ. ಬೆಳ್ತಂಗಡಿ ವೃತ್ತ ನಿರೀಕ್ಷಕರು ರವಿ ಬಿ ಎಸ್ ರವರು ಸ್ಥಳಕ್ಕೆ ಭೇಟಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version