Home ಅಪರಾಧ ಲೋಕ ಬೆಳ್ತಂಗಡಿ : ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಮೃತದೇಹ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಬಳಿ ಪತ್ತೆ

ಬೆಳ್ತಂಗಡಿ : ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಮೃತದೇಹ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಬಳಿ ಪತ್ತೆ

0

ಬೆಳ್ತಂಗಡಿ : ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಅನಾರೋಗ್ಯವೆಂದು ದಾಖಲಾಗಿದ್ದ ರೋಗಿಯೊಬ್ಬರ ಮೃತದೇಹ ಆಸ್ಪತ್ರೆಯ ಹೊರ ವರಾಂಡದಲ್ಲಿ ಕಂಡು ಬಂದಿದ್ದು ಆಸ್ಪತ್ರೆಯಲ್ಲಿನ ನಿರ್ಲಕ್ಷ್ಯದಿಂದ ಈತ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದೆ.

ಬೆಳ್ತಂಗಡಿ ತಾಲೂಕು ಸರ್ವಜನಿಕ ಸರಕಾರಿ ಆಸ್ಪತ್ರೆಗೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಪೆಲತ್ತಾಜೆ ನಿವಾಸಿ ಅಚ್ಚುತ್ತ (42) ಎಂಬವರು ಹೊಟ್ಟೆನೋವು ಎಂದು ಮೇ.10 ರಂದು ಮಧ್ಯಾಹ್ನ ದಾಖಲಾಗಿದ್ದರು.‌ ಇವರು ಮೇ.11 ರಂದು ಬೆಳಗ್ಗೆ 5 ಗಂಟೆಗೆ ಸುಮಾರಿಗೆ ಆಸ್ಪತ್ರೆಯಿಂದ ಹೊರಗಡೆ ಹೋಗಿದ್ದು ಆಸ್ಪತ್ರೆಯ ಹಿಂಭಾಗದ ಡಯಾಲಿಸಿಸ್ ಕೇಂದ್ರದ ಬಳಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಚಿಕಿತ್ಸೆಯಲ್ಲಿದ್ದ ರೋಗಿಯೊಬ್ಬರು ಹೊರ ಹೋಗುವಂತೆ ಮಾಡಿ ಸಾವಿಗೆ ಕಾರಣ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ಮೃತ ವ್ಯಕ್ತಿಯ ಕುಟುಂಬ ಬಡತನದಲ್ಲಿದ್ದು ಪತ್ನಿ ಕೂಲಿ ಕೆಲಸ ಮಾಡುತ್ತಿದ್ದು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version