ಉಜಿರೆ: ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ನಿಜಾ ಕುಲಾಲ್ ಅವರು ಮರುಮೌಲ್ಯಮಾಪನ ಫಲಿತಾಂಶದಲ್ಲಿ 596 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮೊದಲು ಅವರು 593 ಅಂಕಗಳನ್ನು ಪಡೆದಿದ್ದರು. ಇಂಗ್ಲಿಷ್ ವಿಷಯದಲ್ಲಿ 3 ಹೆಚ್ಚುವರಿ ಅಂಕಗಳಿಸಿದ್ದು ಅವರು 596ಅಂಕಗಳೊಂದಿಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ.
ನಿಜ ಕುಲಾಲ್ ಮೇಲಂತಬೆಟ್ಟು ಗ್ರಾಮದ ನಿವಾಸಿ ನಿಲೇಶ್ ಹೆಚ್ ಪೆರಿಂಜೆ ಮತ್ತು ಸುಶ್ರೂಷಕಿ ಜಯಲಕ್ಷ್ಮಿ ದಂಪತಿಗಳ ಮಗಳು.










