Home ಸ್ಥಳೀಯ ಸಮಾಚಾರ ಬೆಳ್ತಂಗಡಿ : ನೇಣುಬಿಗಿದು ಯುವಕ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ : ನೇಣುಬಿಗಿದು ಯುವಕ ಆತ್ಮಹತ್ಯೆಗೆ ಶರಣು

0

ಬೆಳ್ತಂಗಡಿ : ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯ ಚಾರ್ಮಾಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕೊಡಿಹಿತ್ತಿಲು ನಿವಾಸಿ ಬಾಬುಗೌಡ ಪುತ್ರ ಗಣೇಶ್(20) ಎಂಬಾತ ಎ.25 ರಂದು ಮಧ್ಯಾಹ್ನ 1:30 ಕ್ಕೆ ಮನೆಯ ಗುಡ್ಡದಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಂದೆ ಕೂಡ ಆತ್ಮಹತ್ಯೆಗೆ ಪ್ರಯತ್ನ: ಮನೆಯಲ್ಲಿ ಇಂದು ದನದ ಕೊಟ್ಟಿಯನ್ನು ಸ್ವಚ್ಛ ಮಾಡುತ್ತಿದ್ದು ಏಕಾಏಕಿ ಮನೆಯ ಪಕ್ಕದ ಗುಡ್ಡಕ್ಕೆ ತೆರಳಿ ಗಣೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನೆ ಬಗ್ಗೆ ಮಾಹಿತಿ ತಿಳಿದು ಮೃತಪಟ್ಟ ಗಣೇಶ್ ತಂದೆ ಬಾಬುಗೌಡ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಗುಡ್ಡಕ್ಕೆ ಹೋದಾಗ ತಕ್ಷಣ ಸ್ಥಳೀಯರು ರಕ್ಷಣೆ ಮಾಡಿ ಬಾಬುಗೌಡರನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು.‌ಈ ಬಗ್ಗೆ ಧರ್ಮಸ್ಥಳ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version