Home ಸ್ಥಳೀಯ ಸಮಾಚಾರ ಬೆಳ್ತಂಗಡಿ : ಸರಕಾರಿ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ; ಕಂದಾಯ ಇಲಾಖೆಯಿಂದ ತೆರವು ಕಾರ್ಯಾಚರಣೆ

ಬೆಳ್ತಂಗಡಿ : ಸರಕಾರಿ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ; ಕಂದಾಯ ಇಲಾಖೆಯಿಂದ ತೆರವು ಕಾರ್ಯಾಚರಣೆ

3
0

ಬೆಳ್ತಂಗಡಿ : ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿದ ಬಗ್ಗೆ ಬೆಳ್ತಂಗಡಿ ಕಂದಾಯ ಇಲಾಖೆಗೆ ಬಂದ ದೂರಿನ ಹಿನ್ನೆಲೆಯಲ್ಲಿ ಪೊಲೀಸರ ನೇತೃತ್ವದಲ್ಲಿ ಕಾಂಪೌಂಡ್ ತೆರವು ಮಾಡಲಾಗಿದೆ.

ಬೆಳ್ತಂಗಡಿ ನಗರದ ಜೈನ್ ಪೇಟೆಯ ರಾಜೇಶ್ ನಲಿಕೆ ಮತ್ತು ಶಾಜೀದಾ ನಡುವೆ ಜಾಗದ ತಕರಾರು ಪ್ರಕರಣದ ಸಂಬಂಧ ಸ.ನಂ.206/5B ರಲ್ಲಿ ಸರಕಾರಿ ಜಾಗದಲ್ಲಿ ರಾಜೇಶ್ ನಲಿಕೆ ಎಂಬವರು ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಿರುವ ದೂರಿನ ಮೇರೆಗೆ ಬೆಳ್ತಂಗಡಿ ಕಂದಾಯ ಇಲಾಖೆ ಮತ್ತು ಬೆಳ್ತಂಗಡಿ ಪೊಲೀಸರು ಏ.10 ರಂದು ಕಾನೂನು ರೀತಿಯಲ್ಲಿ ತೆರವು ಮಾಡಿ ಸರಕಾರದ ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳ್ತಂಗಡಿ ಕಂದಾಯ ನಿರೀಕ್ಷಕ ರಾಜು ಲಮಾಣಿ, ಗ್ರಾಮ ಆಡಳಿತಾಧಿಕಾರಿ ನಾರಾಯಣ ಕುಲಾಲ್ , ಗ್ರಾಮ ಸಹಾಯಕ ಸತೀಶ್, ಸರ್ವೆ ಇಲಾಖೆ ಮಲ್ಲು ಹಾಗೂ ಬೆಳ್ತಂಗಡಿ ಪೊಲೀಸರು ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here