ಉಜಿರೆ :ಎಸ್ ಡಿಎಂ ಪದವಿಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.98.89 ಫಲಿತಾಂಶದ ಕಲಾವಿದೆ
ಕಲಾ,ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 903 ವಿದ್ಯಾರ್ಥಿಗಳ ಪೈಕಿ 893 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇದರಲ್ಲಿ382 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 476 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅಂಕಿತಾ 591 ಅಂಕಗಳ ಮೂಲಕ ರಾಜ್ಯಕ್ಕೆ 9ನೆ, ವಾಣಿಜ್ಯ ವಿಭಾಗದಲ್ಲಿ ಹಂಸಿನಿ ಭಿಡೆ 595 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ, ಕಲಾವಿಭಾಗದಲ್ಲಿ ನಿಜಾ ಕುಲಾಲ್ 593 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ.
