ಬೆಳ್ತಂಗಡಿ. ತಾಲೂಕಿನ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಇವರ ಮನವಿ ಮೇರೆಗೆ ತೋಟತ್ತಾಡಿ ಗ್ರಾಮದ ದಡ್ಡುಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯರು ಸಚಿವರಲ್ಲಿ ತೋಟತ್ತಾಡಿ ಗ್ರಾಮದ ದಟ್ಟು ಪರಿಸರದ ನಿವಾಸಿಗಳು ತಮ್ಮ ಯಾವುದೇ ಕೆಲಸ ಕಾರ್ಯಗಳಿಗೆ ಜಾಕೆಡಿಯಿಂದ ದುಡ್ಡು ಮೂಲಕ ಹರಿವ ನದಿಯನ್ನು ದಾಟಿ ಹೋಗಬೇಕಾಗುತ್ತದೆ. ಮರದ ತಾತ್ಕಾಲಿಕ ಕಾಲು ಸಂಕ ಇದ್ದರೂ ಮಳೆಗಾಲದಲ್ಲಿ ಅದರಲ್ಲಿ ಹೋಗೋದು ಅಪಾಯಕಾರಿಯಾಗುತ್ತದೆ.. ಹಾಗಾಗಿ ಇದರಲ್ಲಿ ಶಾಲಾ ಮಕ್ಕಳು ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಹೋಗಲು ಭಯಪಡುತ್ತಾರೆ. ಇಲ್ಲಿ ಕಿರು ಸೇತುವೆಯ ಬಗ್ಗೆ ಸಚಿವರಲ್ಲಿ ಸ್ಥಳೀಯರು ಬೇಡಿಕೆಯನ್ನು ಇಟ್ಟರು ಸಚಿವರು ಪೂರಕವಾಗಿ ಸ್ಪಂದಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಯಶೋಧರ ಚಾರ್ಮಾಡಿ,ಪ್ರದೀಪ್ ಕೆ ಸಿ, ಅಶ್ರಫ್ ನೆರಿಯ, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
