ಬೆಳ್ತಂಗಡಿ : 2025 ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಕಚೇರಿಯ ಹೆಡ್ ಕಾನ್ಟೇಬಲ್ ವಿಜಯ ರೈ ಆಯ್ಕೆಯಾಗಿದ್ದಾರೆ.
ವಿಜಯ ರೈ ಹಲವಾರು ಅಪರಾಧ ಪ್ರಕರಣಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಸಹಾಯಕಾರಿ ಕರ್ತವ್ಯ ಮಾಡಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಾಲ್ಸೂರು ಸಮೀಪದ ಬೆಳ್ಳಿಪ್ಪಾಡಿ ಸೀತಾರಾಮ ರೈ ಅವರ ಪುತ್ರ, ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಉಪನ್ಯಾಸಕಿಯಾಗಿರುವ ಪತ್ನಿ ಅನುಷಾ ಹಾಗೂ ಪುತ್ರನ ಅಯ್ಯುಕ್ತ ಜೊತೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಯರ್ಡೂರಿನಲ್ಲಿ ವಾಸವಾಗಿದ್ದಾರೆ .
