Home ಸ್ಥಳೀಯ ಸಮಾಚಾರ ಗೋಪಾಲಕೃಷ್ಣ ಕಾಂಚೋಡು ಅವರಿಗೆ  ನಿವೃತ್ತ ಸಾಧಕ ಯೋಧ ಪ್ರಶಸ್ತಿ ಪ್ರದಾನ

ಗೋಪಾಲಕೃಷ್ಣ ಕಾಂಚೋಡು ಅವರಿಗೆ  ನಿವೃತ್ತ ಸಾಧಕ ಯೋಧ ಪ್ರಶಸ್ತಿ ಪ್ರದಾನ

5
0


ಉಜಿರೆ: ಇಲ್ಲಿನ ನಿವೃತ್ತ ಯೋಧ ಡಾ. ಗೋಪಾಲಕೃಷ್ಣ ಭಟ್ ಕಾಂಚೋಡು ಅವರಿಗೆ ನಿವೃತ್ತ ಸಾಧಕ ಯೋಧ ಪ್ರಶಸ್ತಿಯನ್ನು ಮಾ.20 ರಂದು ಪ್ರದಾನ ಮಾಡಲಾಯಿತು.ದೆಹಲಿಯ‌ ಸೇನಾ ಮುಖ್ಯಾಲಯದಲ್ಲಿ ಜ.ಉಪೇಂದ್ರ ದ್ವಿವೇದಿ ಪ್ರಶಸ್ತಿ ಪ್ರದಾನ ಮಾಡಿದರು.
ಭಾರತೀಯ ಸೇನೆಯಲ್ಲಿ ಪೂರ್ಣ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ವಿಶೇಷವಾಗಿ ಸಮಾಜಕ್ಕೆ ಆದರ್ಶಪ್ರಾಯವಾದ ರೀತಿಯಲ್ಲಿ ಮಾದರಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಯೋಧರಿಗೆ ಭಾರತೀಯ ಸೇನೆಯ ಮಹಾ ದಂಡನಾಯಕ ಜ. ಉಪೇಂದ್ರ ದ್ವಿವೇದಿ ನೀಡುವ ಈ ಪ್ರಶಸ್ತಿಗೆ ಡಾ.ಗೋಪಾಲಕೃಷ್ಣ ಕಾಂಚೋಡು ದ.ಭಾರತದಿಂದ ಆಯ್ಕೆಯಾದ ಪ್ರಥಮ ವ್ಯಕ್ತಿಯಾಗಿದ್ದಾರೆ.

LEAVE A REPLY

Please enter your comment!
Please enter your name here