Home ಅಪಘಾತ ಕೊಕ್ಕಡ ಕಾಡು ಹಂದಿ ಬೈಕ್ ಗೆ ಡಿಕ್ಕಿ ತಂದೆ ಮಗನಿಗೆ ಗಾಯ

ಕೊಕ್ಕಡ ಕಾಡು ಹಂದಿ ಬೈಕ್ ಗೆ ಡಿಕ್ಕಿ ತಂದೆ ಮಗನಿಗೆ ಗಾಯ

3
0

ಬೆಳ್ತಂಗಡಿ : ಕಾಡು ಹಂದಿ ಬೈಕಿಗೆ ಅಡ್ಡ ಬಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಿಂದ ಬಿದ್ದು
ತಂದೆ ಮಗ ಗಾಯಗೊಂಡ ಘಟನೆ ಕೊಕ್ಕಡದ ಖಂಡಿಗ ಚಡವು ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ದಿನೇಶ್ ಎಂಬವರು ಮಾ.18ರಂದು ಸಂಜೆ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಬೈಕಿಗೆ ಕಾಡು ಹಂದಿಯೊಂದು ಅಡ್ಡ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಿಂದ ಬಿದ್ದು ದಿನೇಶ್ ರವರಿಗೆ ಕೈಗಳಿಗೆ, ಕಾಲು ಹಾಗೂ ಹಣೆಯ ಭಾಗಕ್ಕೆ ತೀವ್ರವಾಗಿ ಗಾಯಗಳಾಗಿದ್ದು, ಪುತ್ರ ಯಶೋಧರನಿಗೆ ಕಾಲು ಮತ್ತು ಕೈ ಗಳಿಗೆ ಗಾಯವಾಗಿದೆ.

ತಕ್ಷಣ ಅವರ ಸಂಬಂಧಿಕರೋರ್ವರು ಅವರನ್ನು ಕೊಕ್ಕಡದ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here