Home ಸ್ಥಳೀಯ ಸಮಾಚಾರ ಮಾ 21 ಐತಿಹಾಸಿಕ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ

ಮಾ 21 ಐತಿಹಾಸಿಕ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ

5
0

ಬೆಳ್ತಂಗಡಿ: ಮಾರ್ಚ್ 21ರ ಶನಿವಾರ ನಡೆಯಲಿರುವ 33ನೇ ವರ್ಷದ ಐತಿಹಾಸಿಕ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ನಡೆಯಲಿದ್ದು  ಕಂಬಳದಲ್ಲಿ 130 ಜೊತೆ ಕೋಣಗಳು ನೋಂದಾವಣೆಯಾಗಿದ್ದು ಇನ್ನೂ ಹೆಚ್ಚು ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷರು ಹಾಗೂ ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ‌ ಕಂಬಳಗಳಲ್ಲಿ ಒಂದಾದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳವನ್ನು ಈ ಹಿಂದೆ ಸಮಿತಿಯ ಬೆನ್ನೆಲುಬಾಗಿ ನಿಂತು ಕಂಬಳ ನಡೆಸಲು ಧೈರ್ಯ ತುಂಬಿದವರು ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕರಾದ ವಸಂತ ಬಂಗೇರರು ಎಂದು ನೆನಪಿಸಿದ ರಕ್ಷಿತ್ ಶಿವರಾಂ ಅವರು ಇಂದು ಸಮಿತಿಯ ಸದಸ್ಯರೆಲ್ಲರ ಶ್ರಮದಿಂದ ಕಂಬಳ‌ ಮಾದರಿಯಾಗಿ ನಡೆಯುತ್ತಿದೆ ಎಂದರು.ಈ ಬಾರಿಯ ಕಂಬಳದಲ್ಲಿ ವಿಶೇಷ ಆಕರ್ಷಣೆಯಾಗಿ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅಂತೆಯೇ ಆಹಾರ ಮೇಳ ಮತ್ತು ಪುರಾತನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿವರಿಸಿದರು. ಸಂಪ್ರದಾಯದಂತೆ ಮಾರ್ಚ್ 21ರ ಬೆಳಿಗ್ಗೆ ಕಂಬಳವನ್ನು ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲರು ಉದ್ಘಾಟಿಸಲಿರುವರು. ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ನಾಡಿನ ಖ್ಯಾತ ಟಿ.ವಿ. ನಿರೂಪಕಿ ರಾಧಾ ಹಿರೇಗೌಡರ್ ಉದ್ಘಾಟಿಸಲಿರುವರು. ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವ ರಮನಾಥ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಅಶೋಕ್ ರೈ ಸಹಿತ ಗಣ್ಯಾತಿಗಣ್ಯರು ಭಾಗವಹಿಸಲಿರುವರು. ವಿಜೇತ ಕೋಣಗಳಿಗೆ ಚಿನ್ನದ ಪದಕಗಳ ಬಹುಮಾನಗಳನ್ನು ಈ ಹಿಂದಿನಂತೆಯೇ ಕೊಡಲು ಸಮಿತಿ ತೀರ್ಮಾನಿಸಿದೆ ಎಂದು ರಕ್ಷಿತ್ ಶಿವರಾಂ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಂಬಳದ ಸಮಿತಿಯ ಅಧ್ಯಕ್ಷ ನಿತೀಶ್ ಕುಮಾರ್, ಕಾರ್ಯಾಧ್ಯಕ್ಷ ಶೇಖರ್ ಕುಕ್ಕೇಡಿ, ಸಂಚಾಲಕ ಪ್ರವೀಣ್ ಫರ್ನಾಂಡೀಸ್, ಕೋಶಾಧಿಕಾರಿ ಅಶೋಕ್ ಪಾಣೂರು, ಉಪಾಧ್ಯಕ್ಷ ಪೂಜಾರಿ ಇದ್ದರು.

LEAVE A REPLY

Please enter your comment!
Please enter your name here