ಬೆಳ್ತಂಗಡಿ : ಪ್ರಕೃತಿ ರಮಣೀಯ ಗುರುವಾಯನ’ಕೆರೆ’ಯಲ್ಲಿ ಎರಡು ದುನಗಳಿಂದ ಮತ್ತೆ ಮೀನುಗಳು ಸತ್ತು ತೇಲುತ್ತಿದ್ದು ಮೂರು ವರ್ಷಗಳಲ್ಲಿ ಮೀನು ಹಿಡಿಯಲು ಏಲಂನಲ್ಲಿ ಪಡೆದುಕೊಂಡ ವ್ಯಾಪಾರಿ ಇದೀಗ ಮೀನುಗಳ ಸಾವಿಗೆ ಕಾರಣವೇನೆಂಬುದನ್ನು ತನಿಖೆ ಮಾಡಿಸುವಂತೆ ಸ್ಥಳೀಯ ಗ್ರಾಮಪಂಚಾಯತ್ ಆಡಳಿತಕ್ಕೆ ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾ.ಪಂ. ಆಡಳಿತಕ್ಕೊಳಪಟ್ಟಿರುವ ಗುರುವಾಯನಕೆರೆಯ ವಿಶಾಲ ಕೆರೆಯಲ್ಲಿ ಗ್ರಾ.ಪಂ. ಆಡಳಿತದ ವತಿಯಿಂದ ಮೀನು ಕೃಷಿ ಮಾಡುತ್ತಿದ್ದು ಇದನ್ನು ಇದೇ ಗ್ರಾಮದ ಮೀನು ವ್ಯಾಪಾರಿ ರಿಯಾದ್ ಎಂಬವರು ಗ್ರಾ.ಪಂ. ಏಲಂನಲ್ಲಿ ಭಾಗವಹಿಸಿ ಮೂರು
ವರ್ಷಗಳ ಖಾಯಂ ಅವಧಿಗೆ
6 ಲಕ್ಷ ರೂಪಾಯಿಗೆ ಪಡೆದುಕೊಂಡಿದ್ದಾರೆ.
ಆದರೆ ಮಂಗಳವಾರ ರಿಯಾದ್ ಅವರು ಮೀನು ಹಿಡಿಯುವ ಬಗ್ಗೆ ಕೆರೆಗೆ ಹೋಗಿ ನೋಡಿದಾಗ ಮೀನುಗಳು ಅಲ್ಲಲ್ಲಿ ಸತ್ತು ತೇಲುತ್ತಿರುವುದು ಕಂಡು ಬಂದಿದೆ. ಕೆರೆಯ ಮೀನುಗಳ ಸಾವಿನಿಂದ ಮೀನು ಹಿಡಿಯಲು ಏಲಂ ಮೂಲಕ ರೂ. 6 ಲಕ್ಷಕ್ಕೆ ಪಡೆದುಕೊಂಡಿರುವ ವ್ಯಾಪಾರಿ ರಿಯಾದ್ ಅವರು ಮೀನುಗಳ ಸಾವಿನಿಂದ ಅಪಾರ ನಷ್ಟ ಉಂಟಾಗುವ ಸಾಧ್ಯತೆ ಇದೆ
ಮೀನುಗಳು ಸಾಯಲು ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ನಷ್ಟ ಭರಿಸಿಕೊಡುವಂತೆ ಗ್ರಾಮಪಂಚಾಯತ್ ಆಡಳಿತಕ್ಕೆ ಲಿಖಿತ ದೂರು ನೀಡಿದ್ದಾರೆ.
ಈ ಬಗ್ಗೆ ಗ್ರಾ.ಪಂ. ಆಡಳಿತ ಯಾವ ಕ್ರಮಕೈಗೊಳ್ಳುತ್ತದೆ ಎಂಬುದು ನಾಗರಿಕರ ಕುತೂಹಲಕ್ಕೆ ಕಾರಣವಾಗಿದೆ.












