Home ಸ್ಥಳೀಯ ಸಮಾಚಾರ ದಕ್ಷಿಣಕನ್ನಡ ಜಿಲ್ಲಾ ೨೮ನೇ ಕನ್ನಡ ಸಾಹಿತ್ಯ ಸಮ್ಮೇಳನ: ಆಮಂತ್ರಣಪತ್ರ ಬಿಡುಗಡೆ

ದಕ್ಷಿಣಕನ್ನಡ ಜಿಲ್ಲಾ ೨೮ನೇ ಕನ್ನಡ ಸಾಹಿತ್ಯ ಸಮ್ಮೇಳನ: ಆಮಂತ್ರಣಪತ್ರ ಬಿಡುಗಡೆ

2
0

ಬೆಳ್ತಂಗಡಿ: ಬಿ.ಸಿ. ರೋಡ್‌ನಲ್ಲಿ ಸ್ಪರ್ಶ ಕಲಾಮಂದಿರದಲ್ಲಿ ಮಾ. 26,27,28 ರಂದು ನಡೆಯಲಿರುವ ದಕ್ಷಿಣಕನ್ನಡ ಜಿಲ್ಲಾ28 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣಪತ್ರವನ್ನು ಸೋಮವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ವಿಶ್ವನಾಥ, ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಅಶೋಕ ಶೆಟ್ಟಿ ಸರಪಾಡಿ, ಅಬೂಬಕ್ಕರ್ ಅಮ್ಮುಂಜೆ, ದೇವಪ್ಪ ಕುಲಾಲ್, ರಜನಿ ಚಿಕ್ಕಯ್ಯಮಠ, ವಿ. ಸು. ಭಟ್, ಬಂಟ್ವಾಳ, ಸುಭಾಶ್ಚಂದ್ರ ಜೈನ್ ಮತ್ತು ಹರ್ಷೇಂದ್ರ ಜೈನ್ ಮಾಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here