Home ಸ್ಥಳೀಯ ಸಮಾಚಾರ ಬೈಕ್ ಅಪಘಾತ  ಚಿದಾನಂದ ಗೌಡ ಮೃತ್ಯು; ಪದ್ಮುಂಜ ಸೇವಾ ಸಹಕಾರಿ ಬ್ಯಾಂಕ್ ವಠಾರದಲ್ಲಿ ಅಂತಿಮ ದರ್ಶನ

ಬೈಕ್ ಅಪಘಾತ  ಚಿದಾನಂದ ಗೌಡ ಮೃತ್ಯು; ಪದ್ಮುಂಜ ಸೇವಾ ಸಹಕಾರಿ ಬ್ಯಾಂಕ್ ವಠಾರದಲ್ಲಿ ಅಂತಿಮ ದರ್ಶನ

1
0

ಬಂದಾರು : ಮಾ 08 ಬಂದಾರು ಗ್ರಾಮ ಕುರಾಯ ನಿವಾಸಿ ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಚಿದಾನಂದ ಗೌಡ (56.ಪ್ರಾಯ )ರವರು ಮಾರ್ಚ್ 08 ರಂದು ಬೈಕ್ ನಲ್ಲಿ ಸಂಚಾರಿಸುವಾಗ ಉಪ್ಪಿನಂಗಡಿಯಲ್ಲಿ ನಡೆದ ಅಪಘಾತದಲ್ಲಿ ತೀವ್ರತರನಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಮoಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತರಾಗಿರುತ್ತಾರೆ.
ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತಮ ಜನಸ್ನೇಹಿ ಪರೋಪಕಾರಿ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು.ತಾಯಿ, ಪತ್ನಿ, 2 ಹೆಣ್ಣು, 1 ಗಂಡು, ಮೊಮ್ಮಕ್ಕಳು, ಕುಟುಂಬಸ್ಥರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ರಾತ್ರಿ ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಮೃತರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಪದ್ಮುಂಜ,ಸಿ ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷರಾದ ಅಶೋಕ್ ಗೌಡ ಪಾಂಜಾಳ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅಂಕಿತಾ ಕೆ,ನಿರ್ದೇಶಕರುಗಳು, ಸಿಬ್ಬಂದಿ ವರ್ಗ, ಶ್ರೀ ಕ್ಷೇತ್ರ ಮಲೆಂಗಲ್ಲು ದೇವಸ್ಥಾನ ಆಡಳಿತ ಮೊಕ್ತೇಸರರಾದ ಚಿದಾನಂದ ರಾವ್ ಕೊಲ್ಲಾಜೆ, ಕಣಿಯೂರು ಗುತ್ತು ಸುದರ್ಶನ್ ಹೆಗ್ಡೆ, ಶ್ರೀಮತಿ ರಾಜಶ್ರೀ ಎಸ್ ಹೆಗ್ಡೆ,ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಕಣಿಯೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ಸೀತಾರಾಮ್ ಮಡಿವಾಳ, ತಾಲೂಕು ಮಜ್ದೂರು ಸಂಘ ಅಧ್ಯಕ್ಷರು ವಕೀಲರಾದ ಉದಯ್ ಕುಮಾರ್ ಬಿ. ಕೆ, ಯುವ ವಕೀಲರಾದ ಯತೀಶ್ ಶೆಟ್ಟಿ ಪಣೆಕ್ಕರ,ರಘುಪತಿ ಭಟ್ ಅನಾಬೆ, ವಿಠಲ್ ಭಟ್,ಅಶೋಕ್ ಮೊಗ್ರ ಕಾನಿಸ್ಕ, ಉಮೇಶ್ ಗೌಡ ಅಂಗಡಿಮಜಲು, ಚಂದ್ರಹಾಸ ಗೌಡ ದೇವಸ ಗುತ್ತು ಮುಗೇರಡ್ಕ, ಬಾಲಕೃಷ್ಣ ಗೌಡ ಮುಗೇರಡ್ಕ, ಬಂದಾರು, ಮೊಗ್ರು, ಕಣಿಯೂರು ಗ್ರಾಮದ ಪ್ರಮುಖರು, ಹಾಗೂ ನಾಗರಿಕರು ಬಂಧು ಮಿತ್ರರು, ಕುಟುಂಬಸ್ಥರು,ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here