Home ಸ್ಥಳೀಯ ಸಮಾಚಾರ ಗುರುವಾಯನಕರೆ ಕೆಎಂಜೆ, ಎಸ್‌ವೈ‌ಎಸ್ ವತಿಯಿಂದ ರಂಝಾನ್ ಕಿಟ್ ವಿತರಣೆ;

ಗುರುವಾಯನಕರೆ ಕೆಎಂಜೆ, ಎಸ್‌ವೈ‌ಎಸ್ ವತಿಯಿಂದ ರಂಝಾನ್ ಕಿಟ್ ವಿತರಣೆ;

16
0

ಬೆಳ್ತಂಗಡಿ; ಕರ್ನಾಟಕ ಮುಸ್ಲಿಂ ಜಮಾಅತ್ ( ಕೆಎಂಜೆ) ಮತ್ತು ಸುನ್ನೀ ಯುವಜನ ಸಂಘ (ಎಸ್ ವೈ ಎಸ್) ಗುರುವಾಯನಕೆರೆ ಯೂನಿಟ್ ವತಿಯಿಂದ ನಡೆಸಲ್ಪಟ್ಟ ಸುಮಾರು ಎರಡುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ 121 ಆಯ್ದ ಅರ್ಹ ಮಧ್ಯಮವರ್ಗದ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ ಹಾಗೂ “ಮಹ್ಲರತುಲ್ ಬದ್ರಿಯಾ ಮಜ್ಲಿಸ್” ಮತ್ತು ಬೃಹತ್ ಇಫ್ತಾರ್ ಮೀಟ್ ಗುರುವಾಯನಕರೆ ಶಾದಿ ಮಹಲ್ ನಲ್ಲಿ ನಡೆಸಲಾಯಿತು.

ಅಧ್ಯಕ್ಷತೆಯನ್ನು ಎಸ್ ವೈ ಎಸ್ ಗುರುವಾಯನಕೆರೆ ಯೂನಿಟ್ ಅಧ್ಯಕ್ಷ ಅನ್ಸಾರ್ ವಹಿಸಿದ್ದರು.

ಉದ್ಘಾಟನೆ ಹಾಗೂ ದುವಾ ಆಶೀರ್ವಚನವನ್ನು ಸಯ್ಯಿದ್ ಅಬ್ದುಲ್ ರಹಮಾನ್ ಸಾದಾತ್ ತಂಙಳ್ ನೇರವೇರಿಸಿದರು.

ಮಹ್ಲರತುಲ್ ಬದ್ರಿಯಾ ಮಜ್ಲಿಸ್ ನೇತೃತ್ವವನ್ನು ಸ್ಥಳೀಯ ಮುದರ್ರಿಸ್
ಜುನೈದ್ ಸಖಾಫಿ ವಹಿಸಿದ್ದರು.
ಸ್ಥಳೀಯ ಖತೀಬ್ ಅಬ್ದುಲ್ ಬಾರಿ ಸ‌ಅದಿ ‘ತಂಝಿಲ್ ಆಫ್ ಕುರ್‌ಅನ್’ ತರಗತಿ ನಡೆಸಿಕೊಟ್ಟರು. ದಾನಿಗಳಾದ ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಹಾಜಿ ಮುಹಮ್ಮದ್ ಶರೀಫ್ ಜಿ.ಕೆ ಬಜಾರ್. ಸುಲ್ತಾನ್ ಗೋಲ್ಡ್ ಮೆನೇಜರ್ ಅಬ್ದುಲ್ ಸತ್ತಾರ್. ಹಾಗೂ ಶೇಕುಂಞಿ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕೆಎಂಜೆ ಯೂನಿಟ್ ಅಧ್ಯಕ್ಷ ಮುತ್ತಲಿಬ್, ಕೆಎಂಜೆ ಸರ್ಕಲ್ ಅಧ್ಯಕ್ಷ ಹಮೀದ್ ಫುರ್ಕಾನಿ, ದರ್ಗಾ ಅಧ್ಯಕ್ಷ ಅಬ್ದುಲ್ ರಹಮಾನ್ ಹಾಜಿ, ಅಬ್ದುಲ್ ರಹಮಾನ್ ಸ‌ಅದಿ, ಅಬೂಬಕ್ಕರ್ ಸಿದ್ದೀಕ್ ಝುಹ್ರಿ, ಎಸ್ಎಂಎ ಅಧ್ಯಕ್ಷರ ಉಮಾರ್ ಮಟನ್. ಜಮಾತ್ ಕೋಶಾಧಿಕಾರಿ ಹಾಜಿ ಲತೀಫ್, ಎಸ್ ಎಸ್ ಎಫ್ ಡಿವಿಜನ್ ಅಧ್ಯಕ್ಷ ಇಸಾಕ್ ಅರ್ವ ಉಪಸ್ಥಿತರಿದ್ದರು.
ಎಸ್ ವೈ ಎಸ್ ಸರ್ಕಲ್ ಅಧ್ಯಕ್ಷ ಹಾಜಿ ಹಸೈನಾರ್, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here