Home ಅಪರಾಧ ಲೋಕ ಬೆಳ್ತಂಗಡಿ; ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಪೊಲೀಸ್ ದಾಳಿ ಟಿಪ್ಪರ್ ಸೇರಿದಂತೆ ಸೊತ್ತುಗಳು ವಶಕ್ಕೆ

ಬೆಳ್ತಂಗಡಿ; ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಪೊಲೀಸ್ ದಾಳಿ ಟಿಪ್ಪರ್ ಸೇರಿದಂತೆ ಸೊತ್ತುಗಳು ವಶಕ್ಕೆ

4
0

ಬೆಳ್ತಂಗಡಿ : ಕಡಿರುದ್ಯಾವರ ಗ್ರಾಮದ ಅಲೆಂಜಿಕಟ್ಟ ಎಂಬಲ್ಲಿ ನೇತ್ರಾವತಿ ನದಿ ಕಿನಾರೆಯಿಂದ ಮರಳು ಕಳ್ಳತನ ಮಾಡಿ ಸಾಗಾಟ ಮಾಡಲು ಲಾರಿಗೆ ತುಂಬಿಸುತ್ತಿದ್ದ ವೇಳೆ ದಾಳಿ ನಡೆಸಿದ ಬೆಳ್ತಂಗಡಿ ಪೊಲೀಸರು ಸೊತ್ತುಗಳನ್ನು ವಶಕ್ಕೆ ಪಡೆದು ಇಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಚರ್ಚ್ ಗುಡ್ಡೆ ನಿವಾಸಿ ನಿಜಾಮುದ್ದೀನ್(47) ಮತ್ತು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಿಲ್ಲೂರು ನಿವಾಸಿ ಹನೀಫ್(44) ಎಂಬವರು KA-53-A-9796 ನಂಬರಿನ ಟಿಪ್ಪರ್ ಲಾರಿಯಲ್ಲಿ ಯಾವುದೇ ಸರಕಾರದ ಅನುಮತಿ ಇಲ್ಲದೆ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದರು.

ಅಕ್ರಮ ಮರಳು ತೆಗೆಯುತ್ತಿದ್ದ ಸ್ಥಳದಿಂದ 3 ಲಕ್ಷದ 50 ರೂಪಾಯಿ ಮೌಲ್ಯದ ಒಂದು ಲಾರಿ, 6,500 ರೂಪಾಯಿ ಮೌಲ್ಯದ ಮರಳು,ಮರಳನ್ನು ಲಾರಿಗೆ ತುಂಬಿಸಲು ಉಪಯೋಗಿಸಿದ ‌ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇಬ್ಬರು ಆರೋಪಿಗಳಾದ ನಿಜಾಮುದ್ದೀನ್ ಮತ್ತು ಹನೀಫ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಕುಶಾಲಪ್ಪ ನಾಯ್ಕ್ ಅವರು ಮಾ.4 ರಂದು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

LEAVE A REPLY

Please enter your comment!
Please enter your name here