Home ಅಪಘಾತ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ತೋಟತ್ತಾಡಿಯ ಯುವಕ ಮೃತ್ಯು

ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ತೋಟತ್ತಾಡಿಯ ಯುವಕ ಮೃತ್ಯು

113
0

ಬೆಳ್ತಂಗಡಿ; ಬೆಂಗಳೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತೋಟತ್ತಾಡಿ ನಿವಾಸಿ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಫೆ.20 ರಂದು ಮೃತಪಟ್ಟಿದ್ದಾರೆ.
ಮೃತ ಯುವಕ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ನಿವಾಸಿ ಸನಲ್ ಆಂಟನಿ(25) ಎಂಬವರಾಗಿದ್ದಾರೆ. ಫೆ. 14ರಂದು ಬೆಂಗಳೂರಿನ ಬೆಳ್ಳೂರ್ ಕ್ರಾಸ್ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಈತ ಗಂಭೀರವಾಗಿ ಗಾಯಗೊಂಡಿದ್ದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ
ಮೃತರು ತಂದೆ ತಾಯಿ ಪತ್ನಿ ಹಾಗೂ ಮಗುಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here