ಬೆಳ್ತಂಗಡಿ : ಚಾರ್ಮಾಡಿ ಗ್ರಾಮದ ಪುರುಷರಗುಡ್ಡೆ ಎಂಬಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಫೆ.19 ರಂದು ಸಂಜೆ 3:30 ಸುಮಾರಿಗೆ ಧರ್ಮಸ್ಥಳ ಪೊಲೀಸರು ದಾಳಿ ವೇಳೆ ಆರು ಕೋಳಿ, ಮೂರು ಸಾವಿರ ಹಣ ಹಾಗೂ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ರಮ ಕೋಳಿ ಅಂಕದಲ್ಲಿದ್ದ ನಾವೂರು ನಿವಾಸಿ ಹರಿಶ್ಚಂದ್ರ ,ತೋಟತ್ತಾಡಿ ನಿವಾಸಿ ರಮೇಶ್, ಚಾರ್ಮಾಡಿ ನಿವಾಸಿ ಸುಧಾಕರ, ಚಾರ್ಮಾಡಿ ನಿವಾಸಿ ಅಶೋಕ್, ಬೆಳ್ತಂಗಡಿಯ ಪುಷ್ಪರಾಜ್, ನಾವೂರು ನಿವಾಸಿ ಶ್ರೀಧರ್, ಚಿಬಿದ್ರೆ ನಿವಾಸಿ ಚೆನ್ನಪ್ಪ ಬಂಧಿತ ಆರೋಪಿಗಳು.
ಬೆಳ್ತಂಗಡಿ ಉಪ ವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ನೇತೃತ್ವದ ಸಿಬ್ಬಂದಿ ಎ.ಎಸ್.ಐ ಬಾಲಕೃಷ್ಣ, ಸಿಬ್ಬಂದಿ ಮಲ್ತೇಶ್, ಚರಣ್ ರಾಜ್ ,ಶೇಷಣ್ಣ,ಮಧು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
