Home ಅಪಘಾತ ಮಚ್ಚಿನ ಚಿರತೆ ದಾಳಿಗೆ ನಾಯಿ ಬಲಿ

ಮಚ್ಚಿನ ಚಿರತೆ ದಾಳಿಗೆ ನಾಯಿ ಬಲಿ

0
9

ಬೆಳ್ತಂಗಡಿ: ಮಚ್ಚಿನ ಗ್ರಾಮದ ಮುದಲಡ್ಕದಲ್ಲಿ ಚಿರತೆ ನಾಯಿಯನ್ನು ಬೇಟೆಯಾಡಿದ ಘಟನೆ ಫೆ.17 ರಂದು ತಡ ರಾತ್ರಿ ನಡೆದಿದೆ. ಮುದಲಡ್ಕ ಯಮುನ ಎಂಬುವರು ಸಾಕು ನಾಯಿಯ ಮೇಲೆ ತಡ ರಾತ್ರಿ ಚಿರತೆ ನಾಯಿ ಮೇಲೆ ದಾಳಿ ಮಾಡಿ ಅಲ್ಲಿಯೇ ಸಮೀಪದ ನಿವಾಸಿ ಮೋಹನರವರ ತೋಟದಲ್ಲಿ ನಾಯಿ ಅರ್ಧ ಭಾಗವನ್ನು ತಿಂದು ಹಾಕಿ ಹೋಗಿದೆ. ಅಲ್ಲಲ್ಲಿ ಚಿರತೆಗಳು ಕಂಡು ಬರುತ್ತಿದ್ದು ಜನರು ಆತಂಕ ಪಡುವಂತಾಗಿದೆ. ಗ್ರಾಮ ಪಂಚಾಯಿತಿನ ನಿರ್ದೇಶನದಂತೆ ಅರಣ್ಯ ಇಲಾಖೆಯವರು ಹಲವು ಕಡೆಗಳಲ್ಲಿ ಚಿರತೆಯನ್ನು ಹಿಡಿಯಲು ಬೋನುಗಳನ್ನು ಇರಿಸಿದರು ಒಂದು ಕಡೆಯಿಂದ ಇನ್ನೊಂದು ಕಡೆಯಲ್ಲಿ ಕಂಡುಬರುತ್ತಿದೆ. ಅರಣ್ಯ ಇಲಾಖೆಯಿಂದ ನಿತ್ಯ ಪ್ರಯತ್ನಗಳು ನಡೆದರೂ ಚಿರತೆ ಹಾವಳಿ ತಪ್ಪುತ್ತಿಲ್ಲ. ಹಂತ್ರೆಳು, ಕಡಂಬು, ಕೊಲ್ಲಾಜೆ, ಪಾಲ್ ಎಂಬಲ್ಲಿ ನಿತ್ಯ ಚಿರತೆಯ ಹೆಜ್ಜೆ ಗುರುತುಗಳು ಕಂಡುಬರುತ್ತಿದೆ.

NO COMMENTS

LEAVE A REPLY

Please enter your comment!
Please enter your name here