Home ಅಪಘಾತ ಧರ್ಮಸ್ಥಳ ಪಾಂಗಳ ತಿರುವಿನಲ್ಲಿ ಭೀಕರ ಅಪಘಾತ ಬೈಕ್ ಸವಾರನಿಗೆ ಗಂಭೀರ ಗಾಯ

ಧರ್ಮಸ್ಥಳ ಪಾಂಗಳ ತಿರುವಿನಲ್ಲಿ ಭೀಕರ ಅಪಘಾತ ಬೈಕ್ ಸವಾರನಿಗೆ ಗಂಭೀರ ಗಾಯ

0

ಬೆಳ್ತಂಗಡಿ; ಧರ್ಮಸ್ಥಳ ಪಾಂಗಳ ತಿರುವಿನಲ್ಲಿ ಬಸ್ ಒಂದು ಬೈಕ್ ಹಾಗು ಕಾರಿಗೆ ಡಿಕ್ಕಿಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಗಾಯಾಳು ಧರ್ಮಸ್ಥಳ ಗ್ರಾಮದ‌ ಪಾಂಗಳ ನಿವಾಸಿ ನಾಟಿವೈಧ್ಯರಾಗಿರುವ ಕರಿಯ ಗೌಡ ಎಂಬವರಾಗಿದ್ದಾರೆ.
ಬೈಕ್ ಸವಾರ ಉಜಿರೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದು ಪಾಂಗಳ ತಿರುವಿನಲ್ಲಿ ಬೈಕ್ ಅನ್ನು ರಸ್ತೆಯ ಬಲಬದಿಗೆ ತೆಗೆದುಕೊಳ್ಳುವ ವೇಳೆ ವೇಗವಾಗಿ ಬಂದ ಬಸ್ ಬೈಕಿಗೆ ಡಿಕ್ಕಿಹೊಡೆದು ಅದನ್ನು ಎಳೆಯುತ್ತಾ ರಸ್ತೆಯ ಪೂರ್ಣ ಬಲಬದಿಗೆ ಮುಂದೆ ಬಂದಿದೆ ಇದೇವೇಳೆ ಧರ್ಮಸ್ಥಳ ದಿಂದ ಉಜಿರೆ ಕಡೆಗೆ ಬರುತ್ತಿದ್ದ ಕಾರಿಗೆ ಬಸ್ ಡಿಕ್ಕಿಹೊಡೆದಿದೆ. ಕಾರು ಹಾಗೂ ಬಸ್ ನಡುವೆ ಸಿಲುಕಿದ ಬೈಕ್ ನುಜ್ಜು ಗುಜ್ಜಾಗಿದ್ದು ಬೈಕ್ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಗಾಯಾಳುವನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ‌

NO COMMENTS

LEAVE A REPLY

Please enter your comment!
Please enter your name here

Exit mobile version