ಬೆಳ್ತಂಗಡಿ; ಉಜಿರೆಯ ತನುಷ್ ಶೆಟ್ಟಿ ಹಾಗೂ ಇತರರು ನೀಡಿದ ಖಾಸಗಿ ದೂರನ್ನು ಪುರಸ್ಕರಿಸಿ ಮಂಗಳೂರಿನ ಉದ್ಯಮಿ ಜಿತೇಂದ್ರ ಕೊಟ್ಟಾರಿ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದ್ದು ಅದರಂತೆ ಇದೀಗ
ಮಂಗಳೂರು ಪೊಲೀಸರು ಜಿತೇಂದ್ರ ಕೊಟ್ಟಾರಿ ಅವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ಹಿನ್ನಲೆ
ಮಂಗಳೂರಿನಲ್ಲಿ 2024ರ ಅ 9ರಂದು ಮಂಗಳೂರಿನಲ್ಲಿ ವಾಹನ ಚಾಲನೆಯ ವೇಳೆ ಓವರ್ ಟೇಕ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಯಮಿ ಜಿತೇಂದ್ರಕೊಟ್ಟಾರಿ ಹಾಗೂ ತನುಷ್ ನಡುವೆ ವಾಗ್ವಾದ ನಡೆದಿದ್ದು ಈ ವೇಳೆ ಜಿತೇಂದ್ರ ಕೊಟ್ಟಾರಿ ಪಿಸ್ತೂಲು ತೆಗೆದು ಕೊಲೆ ಬೆದರಿಕೆ ಹಾಕಿದರು ಎಂದು ತನುಷ್ ಶೆಟ್ಟಿ ಆರೋಪಿಸಿದ್ದು ಅದರಂತೆ ಅವರು ದೂರು ನೀಡಿದ್ದು ಇದೀಗ ನ್ಯಾಯಾಲಯದ ಸೂಚನೆಯಂತೆ ಪ್ರಕರಣದಾಖಲಿಸಲಾಗಿದೆ
ಘಟನೆಗೆ ಸಂಬಂಧಿಸಿದಂತೆ ಅದೇ ದಿನ ತನುಷ್ ವಿರುದ್ದ ಜಿತೇಂದ್ರ ಕೊಟ್ಟಾರಿ ದೂರು ನೀಡಿದ್ದು ಅಕ್ರಮ ಪ್ರವೇಶ ಸೇರಿದಂತೆ ಹಲವು ಸೆಕ್ಷನ್ ಗಳಲ್ಲಿ ಪ್ರಕರಣ ದಾಖಲಿಸಲಾಗಿತ್ತು ತನುಷ್ ಶೆಟ್ಟಿ ಹಾಗು ಅಂಕಿತ್ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದರು. ಕೆಲವು ದಿನ ಇವರು ಜೈಲಿನಲ್ಲಿ ಇರಬೇಕಾಗಿತ್ತು.
ಇದಾದ ಬಳಿಕ ತನುಷ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ ತನಗೆ ಅನ್ಯಾಯವಾಗಿದೆ ಎಂದು ಕೊಟ್ಟಾರಿ ವಿರುದ್ದ ಪ್ರಕರಣ ದಾಖಲಿಸುವಂತೆ ಕೇಳಿಕೊಂಡಿದ್ದರು ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ದೂರು ದಾಖಲಿಸುವಂತೆ ಸೂಚನೆ ನೀಡಿದ್ದು ಅದರಂತೆ ಪೊಲೀಸರು ಇದೀಗ ಪ್ರಕರಣ ದಾಖಲಿಸಿದ್ದಾರೆ.



