Home ರಾಜಕೀಯ ಸಮಾಚಾರ ಬೆಳ್ತಂಗಡಿ; ಅಖಿಲ ಭಾರತ ಮುಷ್ಕರ ಕಾರ್ಮಿಕರ ಬೃಹತ್ ಪ್ರತಿಭಟನೆ ತಸ್ತೆ ತಡೆ

ಬೆಳ್ತಂಗಡಿ; ಅಖಿಲ ಭಾರತ ಮುಷ್ಕರ ಕಾರ್ಮಿಕರ ಬೃಹತ್ ಪ್ರತಿಭಟನೆ ತಸ್ತೆ ತಡೆ

0
2

ಬೆಳ್ತಂಗಡಿ; ಸಂವಿಧಾನ ಬದ್ದವಾದ ಕಾರ್ಮಿಕ ವರ್ಗದ, ರೈತ ವರ್ಗದ ಮೂಲಭೂತ ಹಕ್ಕುಗಳ ನಿರಾಕರಿಸುವಂತಹ, ಕಾರ್ಮಿಕರು ತ್ಯಾಗ ಬಲಿದಾನಗಳಿಂದ ಕಾನೂನು ರೂಪವಾಗಿ ಪಡೆದ ಹಕ್ಕು ಸವಲತ್ತುಗಳನ್ನು ರದ್ದು ಪಡಿಸಿ ಕಾರ್ಪರೇಟ್ ಕಂಪಪೆನಿಗಳ ಪರವಾದ 4 ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಕೇಂದ್ರದ ಮೋದಿ ಸರಕಾರ ಭಾರತೀಯರಿಗೆ ದ್ರೋಹ ಎಸಗಿದ ಕೇಂದ್ರ ಸರಕಾರದ ಕಾರ್ಮಿಕ ದ್ರೋಹವನ್ನು ಎಂದೂ ಸಹಿಸೆವು ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ.
ಅವರು ಇಂದು ಕೇಂದ್ರದ ಎನ್.ಡಿ.ಎ. ಸರಕಾರದ ರೈತ ವಿರೋದಿಯಾಗಿ, ಕಾರ್ಮಿಕ ಹಿತಕ್ಕ ಧಕ್ಕೆ ತರುವಂತಹ ದೋರಣೆಯನ್ನು ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಜೆಸಿಟಿಯು ಹಾಗೂ ಸಂಯುಕ್ತ ರೈತ ಮೋರ್ಚ ನೇತೃತ್ವದಲ್ಲಿ ನಡೆಸುತ್ತಿರುವ ಅಖಿಲ ಭಾರತ ಮುಷ್ಕರದ ಭಾಗವಾಗಿ ಬೆಳ್ತಂಗಡಿಯಲ್ಲಿ ನಡೆದ ರಸ್ತೆ ತಡೆ ಪ್ರತಿಭಟನಾ ಸಭೆಯಲ್ಲಿ ಮಾತಾಡುತ್ತಿದ್ದರು. ಭಾರತದ ಇತಿಹಾಸ ಹಸಿವು, ಅವಮಾನ, ಅಸಮಾನತೆ, ಜೀತ ಗಳ ವಿರುದ್ದ ಮಾನವೀಯ ಮೌಲ್ಯಗಳಿಗಾಗಿ ನಡೆದ ಹೋರಾಟದ ದೀರ್ಘ ಹಾದಿಯ ಕಥೆಯಾಗಿದೆ ಎಂದರು. ಕಾರ್ಮಿಕ ವಿರೋದಿ ರೈತವಿರೋದಿ ಮಾತ್ರವಲ್ಲ ಮನುಷ್ಯ ವಿರೋದಿ ಸರಕಾರವಾಗಿದೆ. ಯುವಜನಾಂಗವನ್ನು ತನ್ನ ಭಕ್ತರನ್ನಾಗಿಸಿ ಕಿಡಿಗೇಡಿಗಳನ್ನಾಗಿಸಿ ಕ್ರಿಮನಲ್ ಗಳನ್ನಾಗಿಸಎಂದರುನರೇಂದ್ರ ಮೋದಿ ಸರಕಾರ ಇಂದು, ದೇಶದ ಕಾರ್ಮಿಕ ವರ್ಗ ತ್ಯಾಗ ಬಲಿದಾನಗಳಿಂದ ಜಾರಿಗೊಳಿಸಿ ಕೊಂಡ 29 ಕಾನೂನುಗಳನ್ನು ರದುಮಾಡಿದ್ದು ಮಾತ್ರವಲ್ಲ ಸಾಮ್ರಾಜ್ಯಶಾಹಿಗಳ ಪರವಾಗಿ 4 ಹೊ¸ ಕಾರ್ಮಿಕ ಸಂಹಿತೆಗಳನ್ನು ತಂದಿದೆ ಎಂದರು. ಕೇಂದ್ರ ಸರಕಾರ ಅಂಬಾನಿ ಅದಾನಿ, ಟ್ರಂಪು ಮೊದಲಾದವರ ಗುಲಾಮನಾಗಲು ಮುಂದಾದರೆ ಭಗತ್ ಸಿಂಗರ ಅನುಯಾಯಿಗಳಾದ ದುಡಿಯುವ ಜನರು ಬಿಜೆಪಿ ಸರಕಾರವನ್ನೇ ಕಿತ್ತೆಸೆಯಬೇಕಾಗುತ್ತದೆ ಎಂದ ಎಚ್ಚರಿಸಿದರು.

ರೈತ ಮುಖಂಡರಾದ ಶ್ಯಾಮರಾಜ ಪಟ್ರಮೆ,
ಲಕ್ಷ್ಮಣ ಗೌಡ ಮಾತನಾಡಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಈಶ್ವರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಬೀಡಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಜಯಶ್ರೀ ವಂದಿಸಿದರು. ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದ ಬಳಿಕ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಬೆಳ್ತಂಗಡಿಯ ಮೂರು ಮಾರ್ಗದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ ಕೇಂದ್ರ ಸರಕಾರದ ವಿರುದ್ದ ಘೋಷಣೆಗಳ ಮೂಲಕ ಎಚ್ಚರಿಕೆ ನೀಡಿದರು.

ಹೋರಾಟದ ನಾಯಕತ್ವದಲ್ಲಿ ಸಿಪಿಐಎಂ ಮುಖಂಡರುಗಳಾದ ಜಯರಾಮ ಮಯ್ಯ, ಧನಂಜಯ ಗೌಡ, ಸುಕುಮಾರ್ ದಿಡುಪೆ, ಅಜಿಎಂ.ಜೋಸ್, ಲೋಕೇಶ್ ಕುದ್ಯಾಡಿ, ನೆಬಿಸಾ, ಆಶಾ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷರಾದ ದೇವಕಿ, ಅಂಗನವಾಡಿ ಸಂಘದ ಮುಖಂಡರಾದ ಅರುಣ. ಸುಮಿತ್ರ, ಜಯಲಕ್ಷ್ಮಿ ಅಕ್ಷರದಾಸೋಹ ಸಂಘದ ಮುಖಂಡರಾದ ಸುನೀತ ನೆತ್ತರ, ವಿನೋದ ಪಾಲಡ್ಕ, ಲತಾ ಪುತ್ತೂರು, ಮೆಸ್ಕಾಂ ಸಂಘಟನೆಯ ಮುಖಂಡರಾದ ಮಹೇಶ್, ಜೆ.ಎಂ.ಎಸ್ ಜಿಲ್ಲಾಧ್ಯಕ್ಷರಾದ ಕಿರಣಪ್ರಭ, ಕುಮಾರಿ ಲ್ಯಾಲ, ಎಚ್.ಪಿ.ಸಿ.ಎಲ್., ಸಂಘಟನೆಯ ಅಧ್ಯಕ್ಷರಾದ ಸುರೇಂದ್ರ ನೆರಿಯ, ಪೆಟ್ರೋನೆಟ್ ಸಂಘದ ಖಜಾಂಜಿ ಕಿಶೋರ್, ಡಿ.ವೈ.ಎಫ್.ಐ. ತಾಲೂಕು ಅಧ್ಯಕ್ಷರಾದ ಅಧಿತಿ, ಕಾರ್ಯದರ್ಶಿ ಅಭಿಷೇಕ್, ಅಶ್ವಿತ, ಫಾರೂಕ್ ಮಡಂಜೋಡಿ, ಜಯಂತ ಪಾದೆಜಾಲು, ರೈತ ಮುಖಂಡರುಗಳಾದ ಡೊಂಬಯ ಗೌಡ, ಡಾಗಯ ಗೌಡ, ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ ವಿನುಶರಮಣ ಹಾಗೂ ಇತರರು ಇದ್ದರು.

NO COMMENTS

LEAVE A REPLY

Please enter your comment!
Please enter your name here