Home ಅಪಘಾತ ತೋಟತ್ತಾಡಿಯಲ್ಲಿ ಗೇರು ತೋಟದಲ್ಲಿ ಬೆಂಕಿ ಆಕಸ್ಮಿಕ

ತೋಟತ್ತಾಡಿಯಲ್ಲಿ ಗೇರು ತೋಟದಲ್ಲಿ ಬೆಂಕಿ ಆಕಸ್ಮಿಕ

8
0

ಬೆಳ್ತಂಗಡಿ;  ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿಯಲ್ಲಿ ಗೇರು ತೋಟಕ್ಕೆ ಬೆಂಕಿ ಬಿದ್ದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ಮೂರ್ಜೆ ಎಂಬಲ್ಲಿರುವ ಅಬ್ಬಾಸ್ ಎಂಬವರ ಗೇರು ತೋಟದ ಸಮೀಪ ಹಾದುಹೋಗಿರುವ ವಿದ್ಯುತ್ ಲೈನ್ ನಿಂದ ಬೆಂಕಿಯ ಕಿಡಿಗಳು ಸಿಡಿದು ಬೆಂಕಿಯು ತೋಟವನ್ನು ಆವರಿಸಿ 25 ಕ್ಕಿಂತ ಅಧಿಕ ಗೇರು ಮರಗಳು ಸುಟ್ಟುಹೋಗಿವೆ.
ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ತಂಡ
ಬೆಳಾಲು ಎ ವಿಭಾಗದ ಸದಸ್ಯರಾದ ನಾಗೇಶ್ ನೆರಿಯ, ಸ್ನೇಕ್ ಅನಿಲ್ ಕಕ್ಕಿಂಜೆ, ಸ್ಥಳೀಯರಾದ ಶಾಜಿ ಮೋಹನ್,ನಿತಿನ್ ಹಾಗೂ ಮೆಸ್ಕಾಂ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ ಹೆಚ್ಚಿನ ಪ್ರದೇಶಕ್ಕೆ ಬೆಂಕಿ ಆವರಿಸುವುದನ್ನು ತಡೆದ ಕಾರಣ ಹೆಚ್ಚಿನ ಹಾನಿ ಉಂಟಾಗುವುದು ತಪ್ಪಿದೆ.

LEAVE A REPLY

Please enter your comment!
Please enter your name here