
ಬೆಳ್ತಂಗಡಿ : ಕಾಲೇಜ್ ವಿದ್ಯಾರ್ಥಿನಿಯನ್ನು ಮೂವರು ಕಾರಿನಲ್ಲಿ ಮುಸುಕುಧಾರಿಗಳು ಕಿಡ್ನಾಪ್ ಮಾಡಲು ಪ್ರಯತ್ನಿಸಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಇಡಿ ಡ್ರಾಮ ಪ್ರಕರಣ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ ಫೆ.9 ರಂದು ಬೆಳಗ್ಗೆ ಎಂದಿನಂತೆ 16 ವರ್ಷದ ಕಾಲೇಜ್ ವಿದ್ಯಾರ್ಥಿನಿ 8:30 ಕ್ಕೆ ಸ್ಕೂಟರ್ ನಲ್ಲಿ ಪ್ರಯಾಣ ಮಾಡುವಾಗ ಓಮಿನಿ ಕಾರಿನಲ್ಲಿ ಬಂದ ಮೂವರು ಕಿಡ್ನಾಪ್ ಮಾಡಲು ಯತ್ನಿಸಿ ಚೂರಿ ಇರಿದು ಪರಾರಿಯಾಗಿದ್ದರು ಎಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದರು.
ಬೆಳ್ತಂಗಡಿ ಪೊಲೀಸರು ಇಡಿ ದಿನ ಕಾರ್ಯಾಚರಣೆ ನಡೆಸಿದಾಗ ಓಮಿನಿ ಕಾರು ಪತ್ತೆಯಾಗಿರಲಿಲ್ಲ, ಬೆಳ್ತಂಗಡಿ ಪೊಲೀಸರು ಒಂದೇ ದಿನದಲ್ಲಿ ಕಿಡ್ನಾಪ್, ಚೂರಿ ಇರಿತ ಡ್ರಾಮ ಪ್ರಕರಣ ಬೆಳಕಿಗೆ ತಂದಿದ್ದಾರೆ.
ಕಾಲೇಜ್ ಗೆ ಹೋಗಲು ಇಷ್ಟ ಇಲ್ಲದ ಕಾರಣದಿಂದ ತಾನೇ ಬ್ಲೇಡ್ ನಿಂದ ಇರಿದು ಡ್ರಾಮ ಮಾಡಿಕೊಂಡಿದ್ದಾಳೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ ಒಟ್ಟು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.








