Home ಸ್ಥಳೀಯ ಸಮಾಚಾರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ‌ ವಾತ್ಸಲ್ಯ ಮನೆ ಹಸ್ತಾಂತರ

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ‌ ವಾತ್ಸಲ್ಯ ಮನೆ ಹಸ್ತಾಂತರ

0

ಬೆಳ್ತಂಗಡಿ;  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು,ಅರಸಿನಮಕ್ಕಿ ವಲಯದ ವಾತ್ಸಲ್ಯ ಸದಸ್ಯರಾದ ಜಯಶ್ರೀರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್ ನ ವತಿಯಿಂದ ವಾತ್ಸಲ್ಯ  ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಮನೆಯನ್ನು ಮಾತ್ರಶ್ರೀ ಹೇಮಾವತಿ ವಿ ಹೆಗ್ಗಡೆಯವರು ಹಸ್ತಾಂತರಿಸಿ,ಬದುಕಿನ ದಿನನಿತ್ಯ ಉಪಯೋಗದ ಸಾಮಗ್ರಿಗಳ ವಾತ್ಸಲ್ಯ ಕಿಟ್ ವಿತರಣೆ ಮಾಡಿ ಮಾತನಾಡುತ್ತಾ  ನಾವು ಅಸಹಾಯಕರ ಬದುಕಿಗೆ ಬೆಳಕಾದರೆ ನಮ್ಮ ಜೀವನ ಸಾರ್ಥಕ,ನಮ್ಮ ಮಕ್ಕಳಿಗೆ ಶಿಕ್ಷನದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿದಾಗ ಮಾತ್ರ ಕೊನೆ ಕಾಲಕ್ಕೆ ನಮಗೆ ಅಸರೆಯಾಗುತ್ತಾರೆ,ಇಂದು ಇದ್ದ ಪರಿಸ್ಥಿತಿಗಳು ನಾಳೆ ಇರುವುದಿಲ್ಲ, ಬದುಕಿನಲ್ಲಿ ಒಂದು ಒಂದು ಮೆಟ್ಟಿಲುಗಳನ್ನು ಹತ್ತಿಯೇ ಮೇಲಕ್ಕೆ ಹೋಗಬೇಕಾಗುತ್ತದೆ,ಅಂತೆಯೇ ಜೀವನದಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ, ಬದುಕಿನಲ್ಲಿ ಯಶಸ್ಸನ್ನು ಪಡೆಯಬೇಕು ಎಂದರು.
ರಾಜ್ಯಾದ್ಯಂತ ವಸಲ್ಯ ಮನೆಯನ್ನು ಇಂದು ನಿರ್ಮಿಸುತ್ತಿದ್ದು,ಆದರೆ ಪ್ರತಿಯೊಂದು ಕಡೆಯಲ್ಲಿಯೂ ಕೂಡ ಅನೇಕ ಸಮಸ್ಯೆಗಳಿಂದ ಒಬ್ಬಂಟಿಯಾಗಿ ಜೀವನವನ್ನು ನಡೆಸುತ್ತಿರುವ ಅನೇಕರಿಗೆ ಹಾಗೂ ಅಸಹಾಯಕರಿಗೆ ಇಂದು ಕೂಡ ಪೂರ್ಣ ಸೌಕರ್ಯದ ಮನೆಯು ಇಲ್ಲದೆ ಇರುವುದನ್ನು ಗಮನಿಸಿ ಇಂದು ವಾತ್ಸಲ್ಯ ಮನೆಯನ್ನು ಪೂರ್ಣ ವ್ಯವಸ್ಥೆಗಳೊಂದಿಗೆ ರಾಜ್ಯದ್ಯಂತ ಅಲ್ಲಿಯ ಸ್ಥಿತಿಗತಿಗಳನ್ನು ಗಮನಿಸಿ ವಾಸ್ತಲ್ಯ ಮನೆಯನ್ನು ನಿರ್ಮಿಸಿ ಕೊಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಯವರಾದ ಹರೀಶ್ ಕೃಷ್ಣರವರು,ಕೇಂದ್ರ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ಜಯರಾಮ್, ಜ್ಞಾನವಿಕಾಸ ವಿಭಾಗದ ನಿರ್ದೇಶಕರಾದ ವಿಠಲ್ ಪೂಜಾರಿ,ನಿರ್ದೇಶಕರಾದ ದಿನೇಶ್ ಪೂಜಾರಿ,ಯೋಜನಾಧಿಕಾರಿಗಳಾದ ಯಶೋಧರ್,
ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸುಧೀರ್,ಜನಜಾಗೃತಿ ತಾಲೂಕು ವೇದಿಕೆ ಸದಸ್ಯರು ಸ್ಥಳೀಯ ಗಣ್ಯರು ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯರು,ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರು, ಜ್ಞಾನ ವಿಕಾಸದ ಸಮನ್ವಯಧಿಕಾರಿ ಮಧುರ ವಸಂತ್ ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version