Home ಅಪರಾಧ ಲೋಕ ಕಳೆಂಜ ಮಲಬಾರ್ ಕ್ಲಿನಿಕ್ ನ ಡಾ. ಟಿ.ವಿ ಜೋಸೆಫ್ ನಿಧನ

ಕಳೆಂಜ ಮಲಬಾರ್ ಕ್ಲಿನಿಕ್ ನ ಡಾ. ಟಿ.ವಿ ಜೋಸೆಫ್ ನಿಧನ

0

ಬೆಳ್ತಂಗಡಿ; ಕಳೆಂಜ ಗ್ರಾಮದ ಕಾಯರ್ತಡ್ಕ ನಿವಾಸಿ ಜನಪ್ರಿಯ ವೈದ್ಯರಾಗಿದ್ದ ಮಲಬಾರ್ ಕ್ಲಿನಿಕ್ ನ ಡಾ.ಟಿ.ವಿ ಜೋಸೆಫ್( 75) ಅವರು ಫೆ.2 ರಂದು ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು.
ಕಳೆಂಜ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ಜನಪ್ರಿಯರಾಗಿದ್ದ ಡಾ. ಜೋಸೆಫ್ ಅವರು ತಮ್ಮ ಮಲವಾರ್ ಕ್ಲಿನಿಕ್ ಮೂಲಕ ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಆರೋಗ್ಯ ಸೇವೆ ನೀಡುತ್ತಿದ್ದರು.
ಹಣಕ್ಕಿಂತಲೂ ಮುಖ್ಯವಾಗಿ ಸೇವೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದ ಅವರು ಕೊರೋನಾ ಸಂದರ್ಭದಲ್ಲಿಯೂ ಗ್ರಾಮೀಣ ಜನರಿಗೆ ಮುಕ್ತವಾಗಿ ಚಿಕಿತ್ಸೆ ನೀಡುತ್ತಿದ್ದರು.
ಮೃತರು ಕುಟುಂಬ ವರ್ಗವನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version