Home ಅಪರಾಧ ಲೋಕ ಸುಮಂತ್ ಕೊಲೆ ಪ್ರಕರಣ‌ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಫೆ 4 ರಂದು ಸಿಪಿಐಎಂ ಪ್ರತಿಭಟನೆ; ಬಿ.ಎಂ...

ಸುಮಂತ್ ಕೊಲೆ ಪ್ರಕರಣ‌ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಫೆ 4 ರಂದು ಸಿಪಿಐಎಂ ಪ್ರತಿಭಟನೆ; ಬಿ.ಎಂ ಭಟ್

0

ಬೆಳ್ತಂಗಡಿ;  ಬಾಲಕ ಸುಮಂತ್ ಕೊಲೆಯಾಗಿ ವಾರಗಳೇ ಕಳೆದವು. ಆದರೆ ಕೊಲೆಗಾರರ ಪತ್ತೆ ಇನ್ನೂ ಆಗಿಲ್ಲ. ಇದು ಅತ್ಯಂತ‌ ವಿಷಾಧನೀಯ ಸಂಗತಿ ಎಂದು ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಆಪಾದಿಸಿರುಸುತ್ತಾರೆ.
ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಾಚಾರ, ಕೊಲೆಯಾದರೆ ಬಹುತೇಕ ಪ್ರಕರಣಗಳಲ್ಲಿ ಅಪರಾದಿಗಳು ಪತ್ತೆ ಆಗುತ್ತಿಲ್ಲ‌ ಎಂಬುದು ಆಘಾತಕಾರಿಯಾದ ವಿಚಾರ. ಕರ್ನಾಟಕ ಪೋಲೀಸ್ ಯಾವತ್ತೂ ಸೋಲುವ ಇಲಾಖೆ ಅಲ್ಲ.‌ ಅದರಲ್ಲೂ ಈಗಿನ SP ಯವರು ದಕ್ಷ ಎಂದು ಹೆಸರು ಗಳಿಸಿದವರು. ಈ ಹೆಗ್ಗಳಿಕೆಗಳು ಬೆಳ್ತಂಗಡಿ ಪಾಲಿಗೆ ಅಲ್ಲ ಎನ್ನುವಂತೆ ಆಗಬಾರದಲ್ಲವೇ ಎಂದವರು ಪ್ರಶ್ನಿಸಿದರು?*
*ಇದೀಗ ಸುಮಂತ್ ಕೊಲೆ ಪ್ರಕರಣದಲ್ಲಾದರೂ ಪೋಲೀಸ್ ಇಲಾಖೆ ತನ್ನ ಮೇಲಿನ ಆರೋಪದಿಂದ ಹೊರಬರುವಂತಾಗಬೇಕು. ಈ ವಿಚಾರವಾಗಿ ಸುಮಂತ್ ನ ಮನೆಯವರಿಗೆ ನ್ಯಾಯ ಒದಗಿಸಲು ಸಿಪಿಐಎಂ ಒಂದು ರಾಜಕೀಯ ಪಕ್ಷವಾಗಿ ಧ್ವನಿ ಎತ್ತಲು ನಿರ್ಧರಿಸಿದೆ ಎಂದವರು ತಿಳಿಸಿದರು.
ದಿನಾಂಕ‌: ಫೆ.4 ರಂದು 

ಬುಧವಾರ ಬೆಳಿಗ್ಗೆ 10 ಗಂಟೆಗೆ ಸುಮಂತ್ ನ ಕೊಲೆಗಾರರ ಬಂಧನಕ್ಕಾಗಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಸರಕಾರವನ್ನು ಒತ್ತಾಯಿಸುವ ಮನವಿ ಸಲ್ಲಿಸಲಿದ್ದೇವೆ ಎಂದರು.
ಸುಮಂತ್ ಕೊಲೆಗಾರರ ಪತ್ತೆ ಕಾರ್ಯ ತ್ವರಿತವಾಗಿ ಆಗಬೇಕು, ಆತನ ಕುಟುಂಬಕ್ಕೆ ನ್ಯಾಯ ತೆಗೆಸಿಕೊಡಬೇಕು ಎಂದು ಬಯಸುವ ಪ್ರಜ್ಞಾವಂತ ನಾಗರಿಕರು ಬಂದು ಹೋರಾಟದ ಜೊತೆ ಸೇರಬೇಕಾಗಿ ಅವರು ಕರೆನೀಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version