Home ಅಪರಾಧ ಲೋಕ ಬೆಳ್ತಂಗಡಿ : ರೆಖ್ಯದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬೆಳ್ತಂಗಡಿ : ರೆಖ್ಯದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

0

ಬೆಳ್ತಂಗಡಿ : ದಾವಣಗೆರೆ ನಿವಾಸಿಯೆನ್ನಲಾದ ವ್ಯಕ್ತಿಯೊಬ್ಬರ ಮೃತದೇಹ ರೆಖ್ಯದಲ್ಲಿ ಪತ್ತೆಯಾಗಿದ್ದು‌ . ವಾರಿಸುದಾರರ ಪತ್ತೆಗೆ ಧರ್ಮಸ್ಥಳ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ರೆಕ್ಯಾ ಗ್ರಾಮದ ನೆಲ್ಯಡ್ಕ ಎಂಬಲ್ಲಿ ಜ.26 ರಂದು ಅಪರಿಚಿತ ಸುಮಾರು 40 ರಿಂದ 45 ವರ್ಷ ವಯಸ್ಸಿನ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಮೃತದೇಹದ ಬಳಿ ಪತ್ತೆಯಾಗಿರುವ ದಾಖಲೆಗಳಲ್ಲಿ  ದಾವಣಗೆರೆ ನಿವಾಸಿ ಹನುನಂತಪ್ಪ ಎಂದು ದಾಖಲೆಗಳು ಪತ್ತೆಯಾಗಿದೆ. ಮೃತದೇಹ ಅಸೌಕ್ಯದಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು  ಧರ್ಮಸ್ಥಳ ಪೊಲೀಸರು ಮೃತದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತಪಟ್ಟ ವ್ಯಕ್ತಿ ಸುಮಾರು 5.8 ಅಡಿ ,ಸಾದಾಹರಣ ಶರೀರ,ಗೋಧಿ ಮೈಬಣ್ಣ ,ಮುಖದಲ್ಲಿ ಕಪ್ಪು ಗಡ್ಡ-ಮೀಸೆ, ತಲೆಯಲ್ಲಿ ಕಪ್ಪು ಕೂದಲು, ಹೊಟ್ಟೆಯ ಎಡಭಾಗದಲ್ಲಿ ಕಪ್ಪು ಎಳ್ಳು ಮಚ್ಚೆ ಹಾಗೂ ಎದೆಯ ಎಡಭಾಗದಲ್ಲಿ ಕಪ್ಪು ಗುಳ್ಳೆಯಂತಿರುವ ಕಪ್ಪು ಮಚ್ಚೆ ಗುರುತುಗಳಿವೆ‌‌. ಮೃತದೇಹದ ಮೈಮೇಲೆ ನೇರಳೆ ಬಣ್ಣದ ಉದ್ದ ತೋಳಿನ ಶರ್ಟ್ ,ಕಪ್ಪು ಒಳಚಡ್ಡಿ, ನೀಲಿ ಬಣ್ಣದ ಕೆಂಪು ಚೌಕುಳಿಗಳಿರುವ ಲುಂಗಿ ಧರಿಸಿದ್ದಾರೆ‌.

ಮೃತದೇಹದ ವಾರಿಸುದಾರರು ಪತ್ತೆಯಾದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ 8277986449 ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ 9480805336 ನಂಬರನ್ನು ಸಂಪರ್ಕ ಮಾಡುವಂತೆ ಧರ್ಮಸ್ಥಳ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version