
ಬೆಳ್ತಂಗಡಿ; ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ(ರಿ)/ದ ಕ ಜಿಲ್ಲೆ ಬೆಳ್ತಂಗಡಿ ಘಟಕದ ಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ವನ್ನು ಕುಮಾರಕೃಪಾ ವಾಣಿಜ್ಯ ಸಂಕೀರ್ಣ ದಲ್ಲಿ ಆಚರಿಸಲಾಯಿತು
ಧ್ವಜಾರೋಹಣವನ್ನು ತಾಲೂಕು ಸಮಿತಿಯ ಗೌರವ ಅಧ್ಯಕ್ಷ ಎ.ಕೆ ಶಿವನ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶಪ್ರೇಮವನ್ನು ಬೆಳೆಸಿಕೊಳ್ಳುವಂತೆ ಕರೆನೀಡಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಘಟನೆಯನ್ನು ಬಲಿಷ್ಠ ಗೊಳಿಸಲು ಹಾಗೂ ಮಾಜಿ ಸೈನಿಕರ ಅಗತ್ಯಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಘದ ನೂತನ ಕಚೇರಿಯ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಹಿರಿಯ ಸದಸ್ಯರಾದ ಎ.ಕೆ ಶಿವನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು
ಜಿಲ್ಲಾ ಗೌರವಾಧ್ಯಕ್ಷ ಡಾ ಗೋಪಾಲಕೃಷ್ಣ ಕಾಂಚೋಡು ಇವರ ಉಪಸ್ಥಿತಿಯಲ್ಲಿ ತಾಲ್ಲೂಕಿನ ಪ್ರಧಾನ ಗೌರವಾಧ್ಯಕ್ಷರ ಎ. ಕೆ ಶಿವನ್ ತಾಲೂಕು ಅಧ್ಯಕ್ಷ ಎನ್ ಪಿ ತಂಗಚ್ಚನ್, ಉಪಾಧ್ಯಕ್ಷ ರವಿ ಪ್ರಸಾದ್, ಕಾರ್ಯದರ್ಶಿ ಸುರೇಶ್ ಗೌಡ, ಪ್ರಧಾನ ಸಲಹೆಗಾರರಾದ ಕೆ ಎಸ್ ಮಂಜುನಾಥ್ ಗೌಡ ಹರೀಶ್ ರೈ ಉಪಾಧ್ಯಕ್ಷ ರು ಹಾಗೂ ಸರ್ವಸದಸ್ಯರ ಉಪಸ್ಥಿತಿ ಯೊಂದಿಗೆ ಧ್ವಜಾರೋಹಣ ಹಾಗೂ ಕಚೇರಿಯ ಉದ್ಘಾಟನೆ ನೆರವೇರಿತು. ನಿವೃತ್ತ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಗಳಾದರು.