Home ಅಪರಾಧ ಲೋಕ ಬೆಳ್ತಂಗಡಿ; ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ

ಬೆಳ್ತಂಗಡಿ; ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ

0

ಬೆಳ್ತಂಗಡಿ;  ನಾಲ್ಕು ಕಾರ್ಮಿಕ ವಿರೊದಿ ವೇತನ ಸಂಹಿತೆಗಳು, ರೈತ ವಿರೋದಿ ಬೀಜ ಕಾಯ್ದೆ, ವಿದ್ಯುತ್ ತಿದ್ದುಡಿ ಕಾಯ್ದೆ ಸೇರಿದಂತೆ ಜನರ ಬದುಕಿಗೆ ಅಪಾಯಕಾರಿಯಾದ ಕಾನೂನುಗಳ ಜಾರಿ ಮಾಡಿದ ಕೇಂದ್ರ ಸರಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ಕತ್ತು‌ ಹಿಸುಕಿ ಕೊಂದಿದೆ ಎಂದು ರೈತ-ಕಾರ್ಮಿಕ ರಾಜ್ಯ ಮುಖಂಡರಾದ ಕೆ. ಯಾಧವ ಶೆಟ್ಟಿ ಅವರು ಹೇಳಿದರು.
ಅವರು‌‌ ಇಂದು ಬೆಳ್ತಂಗಡಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ಬೆಳ್ತಂಗಡಿ – ಮಂಗಳೂರು ನಾಲ್ಕು ದಿನಗಳ ಕಾಲ್ನಡಿಗೆ ಜಾತಾವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

ಕೇಂದ್ರ ಸರಕಾರದ ರೈತ- ಕಾರ್ಮಿಕ ವಿರೋದಿ ದೋರಣೆಯ ಖಂಡಿಸಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ‌ ಪೆಬ್ರವರಿ‌12 ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರದ ಬೆಂಬಲಿಸಿ ಈ ಜಾತಾ ನಡೆಸಲಾಗುತ್ತಿದೆ ಎಂದರು.
ಸಭೆಯ ಅಧ್ಯಕ್ಷತೆವಹಿಸಿ ಮಾತಾಡಿದ ಸಿಐಟಿಯು ದ.ಕ. ಜಿಲ್ಲಾ ಅಧ್ಯಕ್ಷರಾದ ಬಿ.ಎಂ.ಭಟ್ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಾರ್ಮಿಕ‌ವಿರೋದಿ, ರೈತ ವಿರೋದಿ ಮಾತ್ರವಲ್ಲ ಭಾರತೀಯ ಪ್ರಜೆಗಳ ವಿರೋದಿ ಸರಕಾರ ಎಂದರು. ಕಾರ್ಮಿಕರಿಗೆ ಇರುವ ಸಂಘ ಕಟ್ಟುವ ಹಕ್ಕು, ಅನ್ಯಾಯದ ವಿರುದ್ದ ಪ್ರತಿಭಟಿಸುವ ಹಕ್ಕು, ನ್ಯಾಯ ವೇತನ, ಸಮಾನ ವೇತನ, ಕೆಲಸದ ಮತ್ತು ಶಿಕ್ಷಣದ ಹಕ್ಕು ಮೊದಲಾದ ಸಂವಿಧಾನ ಬಧ್ದ ಹಕ್ಕುಗಳನ್ನೇ ಇಲ್ಲವಾಗಿಸಿದೆ ಎಂದು ಟೀಕಿಸಿದರು. ಕಾರ್ಮಿಕರು‌ ತ್ಯಾಗ‌ ಬಲಿದಾನಗಳ ಹೋರಾಟಗಳಿಂದ‌ ಪಡೆದ‌ ಕಾನೂನುಗಳನ್ನು ರದ್ದು‌ ಪಡಿಸಿದ‌ ಮೋದಿ‌ ಸರಕಾರ ಮಾಲಕರ‌ ಪರವಾದ ಸಂಹಿತೆಗಳ‌ ಜಾರಿ ಮಾಡಿದೆ. ಈ‌ ಸಂಹಿತೆಗಳ ಹಿಂಪಡೆಯುವವರೆಗೆ, ರದ್ದು ಪಡಿಸಿದ ನಮ್ಮ ಹಕ್ಕುಗಳ 29 ಕಾನೂನುಗಳ ಮರು ಸ್ಥಾಪಿಸುವವರೆಗೆ ನಮ್ಮ ಹೋರಾಟ ನಿಲ್ಲದು ಎಂದರು.

ಸಾವರ್ಕರ್ ಬ್ರಿಟೀಶರ ಬೂಟು ನೆಕ್ಕಿ ಸ್ವಾತಂತ್ರ‌ಚಳವಳಿಗೆ ದ್ರೋಹ ಬಗೆದು ಭಾರತೀಯರಿಗೆ ಅವಮಾನ ಮಾಡಿದ್ದರೆ ಇಂದು ನರೇಂದ್ರ ಮೋದಿ ಅದಾನಿ ಅಂಬಾನಿಯವರ ಕಾಲಿಗೆ ಬಿದ್ದಿದ್ದು ಕಾರ್ಮಿಕ‌ ವರ್ಗಕ್ಕೆ ದ್ರೊಹ ಎಸಗಿದ್ದಾರೆ ಎಂದರು.
ಮೊದಲಿಗೆ ಜಾತಾ ತಂಡದ ನಾಯಕಿ ಈಶ್ವರಿ ಎಲ್ಲರನ್ನು‌ ಸ್ವಾಗತಿಸಿದರು. ಕೊನೆಗೆ ಜಯಶ್ರಿ ವಂದಿಸಿದರು. ಶ್ಯಾಮರಾಜ್, ಲೋಲಾಕ್ಷಿ ಬಂಟ್ವಾಳ, ಪುಷ್ಪ, ಧನಂಜಯ, ಅಭಿಷೇಕ್, ಅಧಿತಿ, ಫಾರೂಕ್, ಸುಕುಮಾರ್, ಅಶ್ವಿತ, ಲತಾ ಪುತ್ತೂರು, ಕುಮಾರಿ, ಅಜಿ.ಎಂ.ಜೋಸ್, ಸಲಿಮೋನ್, ಪ್ರದೀಪ್ ಕಳೆಂಜ, ನಜೀರ್, ಮೊದಲಾದವರು ಇದ್ದರು. ಬಳಿಕ ಜಾತಾ ಮಂಗಳುರು‌ ಕಡೆ ಸಾಗಿತು. ಇಂದು ಮೂರ್ಜೆ ತಲುಪುವ ಜಾತಾ 27-1-2026 ರಂದು ಮೂರ್ಜೆಯಿಂದ ಹೊರಟು ಬಿಸಿರೋಡಿಗೆ ಮಾರನೇ ದಿನ ಪಡೀಲು ತಲುಪಿ 29-1-2026 ರಂದು ಮಂಗಳೂರು ತಲುಪಲಿದೆ

NO COMMENTS

LEAVE A REPLY

Please enter your comment!
Please enter your name here

Exit mobile version