
ಬೆಳ್ತಂಗಡಿ; ರಾಷ್ಟ್ರೀಯ ಮತದಾರರ ದಿನಾಚರಣೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಚುನಾವಣಾ ಉಪತಹಸೀಲ್ದಾರ್ ರಂಜನ್ ವಹಿಸಿದ್ದರು.
ತಾಲೂಕು ಕಚೇರಿಯ ವಿಷಯ ನಿರ್ವಾಹಕರಾದ ಮೃತ್ಯುಂಜಯರವರು ಮತದಾರರ ದಿನಾಚರಣೆಯ ಮಹತ್ವವನ್ನು ವಿವರಿಸಿದರು .
ಈ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಮತದಾರ ದಿನಾಚರಣೆಯ ಪ್ರಯುಕ್ತ ನಡೆಸಲಾದ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದರವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ತಾಲೂಕು ಮಟ್ಟದ,ಪದವಿ ಪೂರ್ವ ಕಾಲೇಜು ವಿಭಾಗದ, ಪ್ರಬಂಧ ಸ್ಪರ್ಧೆಯಲ್ಲಿ ಕು. ಕೀರ್ತನ, ಪದವಿ ಪೂರ್ವ ಕಾಲೇಜು ಬೆಳ್ತಂಗಡಿ(ಪ್ರಥಮ), ಕು.ರಕ್ಷಿತಾ,ಪದವಿ ಪೂರ್ವ ಕಾಲೇಜು ಉಜಿರೆ (ದ್ವಿ),ಕು.ಶ್ರಾವ್ಯ, ಸ್ರೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜ್,ಮಡಂತ್ಯಾರು(ತೃ) ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಕು.ಅನ್ವಿತಾ ಎ. ಸರಕಾರಿ ಪ್ರೌಢಶಾಲೆ ವೇಣೂರು( ಪ್ರ), ಕು.ಸಾನ್ವಿತ ಎಂ.ಎಸ್. ಸೇಕ್ರೆಡ್ ಹಾರ್ಟ್ ಅನುದಾನಿತ ಪ್ರೌಢ ಶಾಲೆ ಮಡಂತ್ಯಾರು (ದ್ವಿ), ಕು.ಪ್ರಾಪ್ತಿ ಎಂ.ಗೌಡ, ವಾಣಿ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ(ತೃ) ಇವರಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು.
ತಾಲೂಕು ಪಂಚಾಯತಿಯ ಅಧೀಕ್ಷಕ ಡಿ. ಪ್ರಶಾಂತ್ ಬಳoಜ, ತಾಲೂಕು ಚುನಾವಣಾ ಶಾಖೆಯ ಕೊರಗಪ್ಪ ಹೆಗ್ಡೆ, ತಾಲೂಕು ತಾಲೂಕು ದೈಹಿಕ ಶಿಕ್ಷಣ ಪರಿವಿಕ್ಷಣಾಧಿಕಾರಿ ಶ್ರೀಮತಿ ಸುಜಯ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದು ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.