
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್(ರಿ) ಕಣಿಯೂರು ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಗಾರವನ್ನು ಕೊರಿಂಜ ಸಮುದಾಯ ಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಿಯೂರು ವಲಯದ ವಲಯಾಧ್ಯಕ್ಷರಾದ ರಮಾನಂದ ಪೂಜಾರಿ ರವರು ವಹಿಸಿದರು.ನಿಕಟ ಪೂರ್ವ ವಲಯಾಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ ರವರು ದೀಪ ಬೆಳಗಿಸು ದರೊಂದಿಗೆ ಉದ್ಘಾಟಿಸಿದರು.
ತರಬೇತಿ ಕಾರ್ಯಗಾರದಲ್ಲಿ ಯೋಜನಾಧಿಕಾರಿಯವರಾದ ಅಶೋಕ್ ರವರು ಒಕ್ಕೂಟದ ಮಹತ್ವ,ಪದಾಧಿಕಾರಿಗಳ ಜವಾಬ್ದಾರಿ,ಒಕ್ಕೂಟದಲ್ಲಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನ,ಯೋಜನೆಯಿಂದ ಸಿಗುವ ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸಿಕೊಡುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.ರಿಕವರಿ ಯೋಜನಾಧಿಕಾರಿಯವರಾದ ಆನಂದ್ ರವರು ಬಡ್ಡಿದರದ ಲೆಕ್ಕಾಚಾರದ ಬಗ್ಗೆ ಮಾಹಿತಿ ನೀಡಿದರು.ಈ ಸಂಧರ್ಭದಲ್ಲಿ ವಲಯದ ಮೇಲ್ವಿಚಾರಕಿ ಶಿಲ್ಪಾ,ಒಕ್ಕೂಟದ ಅಧ್ಯಕ್ಷರು,ಪದಾಧಿಕಾರಿಗಳು, ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.