
ಬೆಳ್ತಂಗಡಿ; ತಾಲೂಕಿನಾದ್ಯಂತ ಚಿರತೆ ಹಾವಳಿ ನಿರಂತರವಾಗಿ ಮುಂದುವರಿದಿದ್ದು ಭಾನುವಾರ ತಡ ರಾತ್ರಿ ನಡ ಕನ್ಯಾಡಿಯಲ್ಲಿ ರಸ್ತೆಬದಿಯಲ್ಲಿ ಚಿರತೆ ನೋಡಲು ಸಿಕ್ಕಿದ್ದು ಜನರಿಗೆ ಭಯ ಮೂಡಿಸಿದೆ. ಕನ್ಯಾಡಿ ಪರಿಸರದಲ್ಲಿ ಚಿರತೆಯ ಓಡಾಟ ಮತ್ತಷ್ಟು ಹೆಚ್ಚಾಗಿದೆ.
ನಡ ಗ್ರಾಮದ ಕನ್ಯಾಡಿಯಲ್ಲಿ ಭಾನುವಾರ ಬೆಳಿಗ್ಗೆ ಸಾಕುನಾಯಿಯನ್ನು ಚಿರತೆ ಹೊತ್ತೊಯ್ದ ಪ್ರಕರಣ ನಡೆದಿದೆ.
ಮಲವಂತಿಗೆ ಗ್ರಾಮದ ದಿಡುಪೆ-ಪರಂಬೇರು ರಸ್ತೆಯ ಕರಿಯಂದೂರು ಕ್ರಾಸ್ ಬಳಿ ಭಾನುವಾರ ಸಂಜೆ ಸ್ಥಳೀಯರಿಗೆ ಚಿರತೆ ಕಾಣಸಿಕ್ಕಿದೆ. ಚಿರತೆಯ ಓಡಾಟ ಜನರಲ್ಲಿ ಭಯ ಹೆಚ್ಚಿಸಿದೆ.