
ಬೆಳಾಲು : ಶ್ರೀ ಅನಂತಪದ್ಮನಾಭ ದೇವಸ್ಥಾನ ಜಾತ್ರೋತ್ಸವ ಯಶಸ್ವಿಯ ಬಗ್ಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಲೆಕ್ಕಪತ್ರ ಮಂಡನೆ. ಜ.14 ರಂದು ಮಕರ ಸಂಕ್ರಾಂತಿಯ ದಿನ ಶ್ರೀ ಕ್ಷೇತ್ರದ ವಠಾರದಲ್ಲಿ ನೆರವೇರಿತು. ಈ ಸಭಾಧ್ಯಕ್ಷತೆಯನ್ನು ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಲಿಂಗಪ್ಪ ಪೂಜಾರಿ ಬನಂದೂರು ಇವರು ವಹಿಸಿಕೊಂಡರು, ಅಭಿನಂದನಾ ಭಾಷಣಗಾರರಾಗಿ ವಿಜಯ ಮುಖ್ಯೋಪಾಧ್ಯಾಯಿನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆರಿಯಡ್ಕ ಇವರು ದೇವಸ್ಥಾನದ ಸ್ವಚ್ಛತೆ ಅಚ್ಚುಕಟ್ಟುತನ ಜಾತ್ರಾ ಮಹೋತ್ಸವದ ಯಶಸ್ವಿಗೆ ಸೇವೆ ಸಲ್ಲಿಸಿದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಊರ ಸಮಸ್ತ ಭಕ್ತ ಬಾಂಧವರಿಗೆ ತುಂಬು ಹೃದಯದ ಅಭಿನಂದನೆಯನ್ನು ಸಲ್ಲಿಸಿದರು. ದೇವಸ್ಥಾನದ ಪಾರದರ್ಶಕವಾದ ಲೆಕ್ಕಪತ್ರ ಮಂಡನೆಗೆ ಶ್ಲಾಘನೆ ವ್ಯಕ್ತಪಡಿಸಿ ದೇವಸ್ಥಾನವು ಜಿಲ್ಲೆಗೆ ಮಾದರಿ ದೇವಸ್ಥಾನ ಎಂದುಮೆಚ್ಚುಗೆ ವ್ಯಕ್ತ ಪಡಿಸಿದರು.

ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ಸತೀಶ್ ಎಳ್ಳುಗದ್ದೆ ಸ್ವಾಗತಿಸಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀ ಶ್ರೀನಿವಾಸ ಗೌಡ ವಕೀಲರು ಪ್ರಸ್ತಾವಿಕ ಮಾತುಗಳನ್ನಾಡಿದರು. ವ್ಯವಸ್ಥಾಪನ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ ಧನ್ಯವಾದವಿತ್ತರು, ಗಿರೀಶ್ ಮಂಜೊತ್ತು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಜಾತ್ರೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಚಾರಪಡಿಸಿದ ಶ್ರೀ ಗಿರೀಶ್ ಗೌಡ.ಬಿ.ಕೆ ಕುಂಬುಡಂಗೆ -ಬಂದಾರು, ಕಾಮಗಾರಿ ಕೆಲಸದ ನಿರ್ವಹಣೆ ಮಾಡಿದ ಶ್ರೀ ಹರೀಶ್ ಮುಂಡೆತ್ಯಾರ್ , ನಾಟಿ ಹೂಗಳಿಂದ ಹೂಗುಚ್ಚಗಳ್ಳನ್ನು ನೀಡಿದ ಜ್ಞಾನವಿಕಾಸದ ಮಹಿಳೆಯರನ್ನು ಗೌರವಿಸಲಾಯಿತು ಹಾಗೂ ಜಾತ್ರೆಯ ಶ್ರಮದಾನ ಸಂದರ್ಭದಲ್ಲಿ ಉಂಟಾದ ನೋವಿನ ಚಿಕಿತ್ಸೆಗೆ ರುಕ್ಮಯ ಗೌಡ ಏರ್ ದೊಟ್ಟು ಇವರಿಗೆ ಸಹಾಯ ಹಸ್ತವನ್ನು ನೀಡಲಾಯಿತು,ವೇದಿಕೆಯಲ್ಲಿ ಕ್ಷೇತ್ರದ ಅಸ್ರಣ್ಣರಾದ ಗಿರೀಶ್ ಬಾರಿತಾಯ ಪಾರಲ, ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷರಾದ ಮಮತಾ ದಿನೇಶ್ ಪೂಜಾರಿ ಉಪ್ಪಾರು,ಮಹಿಳಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ,ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಹರೀಶ್ ಪೋಸೊಟ್ಟು ಹಾಗೂ ಊರಿನ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅನಂತೋಡಿ ಶ್ರೀ ಅನಂತೇಶ್ವರ ಫ್ರೆಂಡ್ಸ್ ಇವರ ನಿರ್ವಹಣೆಯಲ್ಲಿ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ – ಕಳವಾರು ಇವರಿಂದ ನಾಗರ ಪಂಚಮಿ ಎಂಬ ತುಳು ಯಕ್ಷಗಾನ ಪ್ರದರ್ಶನ ನಡೆಯಿತು.










