Home ಅಪರಾಧ ಲೋಕ ಬೆಳ್ತಂಗಡಿ : ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಪಿಕ್ ಆಪ್ ವಾಹನ ವಶಕ್ಕೆ

ಬೆಳ್ತಂಗಡಿ : ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಪಿಕ್ ಆಪ್ ವಾಹನ ವಶಕ್ಕೆ

0

ಬೆಳ್ತಂಗಡಿ : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ತಂಡ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ವನದುರ್ಗಾ ದೇವಸ್ಥಾನದ ರಸ್ತೆಯಲ್ಲಿ ಖಚಿತ ಮಾಹಿತಿ ಮೇರೆಗೆ ಜ.8 ರಂದು ಸುಮಾರು 9:30 ಕ್ಕೆ KA-21-A-2846 ನಂಬರಿನ ಪಿಕ್ ಆಪ್ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ಮಾಡಿದಾಗ ಅಕ್ರಮ ಮರಳು ಸಾಗಾಟ ಪತ್ತೆಯಾಗಿದೆ.

ಅಕ್ರಮ ಮರಳು ಸಾಗಟ ಮಾಡುತ್ತಿದ್ದ ಪಿಕಪ್ ವಾಹನ ಚಾಲಕ ಕಲ್ಮಂಜ ನಿವಾಸಿ ಮೋಹನ್ , ಆನಂದ್, ಇಬ್ರಾಹಿಂ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜ.8 ರಂದು ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version