
ಬೆಳ್ತಂಗಡಿ : ಪತ್ನಿ ಮನೆಗೆ ಬಂದು ಪತ್ನಿ ಮತ್ತು ಮನೆ ಮಂದಿಯೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಓಡಿ ಹೋದ ವ್ಯಕ್ತಿಯ ಮೃತದೇಹ ಫಲ್ಗುಣಿ ನದಿಯಲ್ಲಿ ಪತ್ತೆಯಾದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪೆರಿಂಜೆ ನಿವಾಸಿ ಸುಜಯ ಜೊತೆ 15 ವರ್ಷದ ಹಿಂದೆ ಯತೀಶ್ ಪೂಜಾರಿ(41) ವಿವಾಹವಾಗಿ ಈ ದಂಪತಿಗಳಿಗೆ 2 ಗಂಡು ಮಕ್ಕಳಿದ್ದು. ಬಳಿಕ ಪತ್ನಿ ಸುಜಯ ಮನೆಯ ಬಳಿ ಪ್ರತ್ಯೇಕ ಮನೆ ಮಾಡಿ ಸಂಸಾರ ಮಾಡುತ್ತಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ಪತಿ – ಪತ್ನಿ ನಡುವೆ ಕೌಟುಂಬಿಕ ಮನಸ್ತಾಪ ಉಂಟಾಗಿ ಯತೀಶ್ ಪೂಜಾರಿ ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದರು. ಬಳಿಕ ವಿದೇಶಕ್ಕೆ ಹೋಗಿ ವಿದೇಶದಿಂದ 20 ದಿನಗಳ ಹಿಂದೆ ಅಕ್ಕನ ಮನೆಗೆ ಬಂದು ಒಂದು ವಾರದ ಹಿಂದೆ ಮುಡಿಪು ಎಂಬಲ್ಲಿ ಹೋಟೆಲ್ ಕೆಲಸ ಸೇರಿಕೊಂಡಿದ್ದರು. ಪತ್ನಿ ಜೊತೆ ದೂರವಾಣಿ ಮೂಲಕ ಜಗಳವಾಡಿ ಯತೀಶ್ ಡಿ.22 ರಂದು ಪೆರಿಂಜೆ ಹೆಂಡತಿ ಸುಜಯ ಮನೆಗೆ ಬಂದು ಪತ್ನಿ ಮತ್ತು ಮನೆಮಂದಿ ಜೊತೆ ಜಗಳವಾಡಿ ಅಲ್ಲಿಂದ ಓಡಿ ಹೋದ ಯತೀಶ್ ಪೂಜಾರಿಯ ಮೃತದೇಹ ಡಿ.24 ರಂದು ಸಂಜೆ 4 ಗಂಟೆಗೆ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪೇರಿ ಎಂಬಲ್ಲಿ ತೋರ್ಪೆ ಡ್ಯಾಂ ಬಳಿಯ ಫಲ್ಗುಣಿ ನದಿ ನೀರಿನಲ್ಲಿ ಪತ್ತೆಯಾಗಿದೆ.
ನೀರಿಗೆ ಆಕಸ್ಮಿಕವಾಗಿ ಬಿದ್ದು ಅಥವಾ ನದಿ ನೀರಿಗೆ ಹಾರಿ ಮೃತಪಟ್ಟಿರುವ ಸಾಧ್ಯತೆಯಿದ್ದು. ಈ ಸಾವಿನ ಬಗ್ಗೆ ಸಂಶವಿದ್ದು. ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ವೇಣೂರು ಪೊಲೀಸ್ ಠಾಣೆಗೆ ಡಿ.24 ರಂದು ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಬೈದರ್ಲಬೆಟ್ಟು ನಿವಾಸಿ ಮೃತಪಟ್ಟ ಯತೀಶ್ ಪೂಜಾರಿ ಸಹೋದರ ಕಿಶೋರ್ ಕೋಟ್ಯಾನ್ ಎಂಬವರು ದೂರು ನೀಡಿದ್ದಾರೆ.
ದೂರಿನ ಆಧಾರದಲ್ಲಿ ವೇಣೂರು ಪೊಲೀಸರು ಕಲಂ 194(3)(iv) BNSS-2023 ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








