
ಬೆಳ್ತಂಗಡಿ; ತಾಲೂಕಿನಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಜೇಮ್ಸ್ ಪಟ್ಟೇರಿಲ್ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಬಿಷಪ್ ಅವರು ತಮ್ಮ ಕ್ರಿಸ್ಮಸ್ ಸಂದೇಶದಲ್ಲಿ ಕ್ರಿಸ್ಮಸ್ ಹಬ್ಬ ಜಗತ್ತಿಗೆ ಪ್ರೀತಿ ಮತ್ತು ಸಾಹೋದರತೆಯ ಸಂದೇಶವನ್ನು ನೀಡುತ್ತಿದೆ ಎಂದರು. ಧರ್ಮಪ್ರಾಂತ್ಯದ ಚಾನ್ಸೆಲರ್ ಫಾ ಲಾರೆನ್ಸ್ ಪೂಣೂಲಿಲ್, ಫಾ ಅಬ್ರಹಾಂ ಪಟ್ಟೇರಿಲ್, ಫಾ.ಥೋಮಸ್ ಕಣ್ಣಾಂಗಲ್, ಅವರು ಇದ್ದರು.
ತಾಲೂಕಿನ ಎಲ್ಲ ಚರ್ಚ್ ಗಳಲ್ಲಿಯೂ ಸಂಭ್ರಮದಿಂದ ಕ್ರಿಸ್ಮಸ್ ಆಚರಣೆ ನಡೆಯಿತು. ಸ್ಥಳೀಯ ಧರ್ಮಗುರುಗಳು ಧರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮಗಳಲ್ಲಿ ಭಾಗಿಗಳಾದರು.









