Home ಅಪರಾಧ ಲೋಕ ಬಾಂಗ್ಲಾ ಪ್ರಜೆಗೆ ಪಾಸ್ ಪೋರ್ಟ್ ಮಾಡಲು ಸಹಕರಿಸಿದ ವಿಟ್ಲ ಪೊಲೀಸ್ ಠಾಣೆಯ ಪೇದೆಯ ಬಂಧನ

ಬಾಂಗ್ಲಾ ಪ್ರಜೆಗೆ ಪಾಸ್ ಪೋರ್ಟ್ ಮಾಡಲು ಸಹಕರಿಸಿದ ವಿಟ್ಲ ಪೊಲೀಸ್ ಠಾಣೆಯ ಪೇದೆಯ ಬಂಧನ

24
0

ಮಂಗಳೂರು : ಶಂಕಿತ ಬಾಂಗ್ಲಾ ದೇಶದ ಪ್ರಜೆಗೆ ಪಾಸ್ ಪೋರ್ಟ್ ಮಾಡಲು ವಿಟ್ಲ ಪೊಲೀಸ್ ಠಾಣೆಯ ಪೇದೆ ಪ್ರದೀಪ್ ಎಂಬಾತ ಸಹಾಯ ಮಾಡಿ ಬಳಿಕ ಸಾಕ್ಷ್ಯ ನಾಶ ಮಾಡಿದ ಪ್ರಕರಣ ಸಂಬಂಧ ನಕಲಿ ದಾಖಲೆ ನೀಡಿ ಪಾಸ್ ಪೋರ್ಟ್ ಮಾಡಿಸಿಕೊಂಡ ಶಂಕಿತ ಬಾಂಗ್ಲಾದೇಶ ಪ್ರಜೆ ಶಕ್ತಿ ದಾಸ್ ಮತ್ತು ವಿಟ್ಲ ಪೊಲೀಸ್ ಪೇದೆ ಪ್ರದೀಪ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಸಾಬು ಮಿರ್ಜಿ ಎಂಬವರು ನೀಡಿದ ದೂರಿನ ಮೇರೆಗೆ ಡಿ.20 ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸಿಸುವುದಾಗಿ ಶಂಕಿತ ಬಾಂಗ್ಲಾದೇಶ ಪ್ರಜೆ ಶಕ್ತಿ ದಾಸ್ ಎಂಬಾತ 2025 ಫೆಬ್ರವರಿ ತಿಂಗಳಲ್ಲಿ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಈ ಅರ್ಜಿಗೆ ವೆರಿಫಿಕೇಶನ್ ಮಾಡುವಾಗ ವಿಳಾಸ ತಾಳೆಯಾಗದಿದ್ದರಿಂದ ಬೀಟ್ ಸಿಬ್ಬಂದಿ ಸಾಬು ಮಿರ್ಜ ಅವರು ಪರಿಶೀಲನೆ ಮಾಡಿ ನಾ-ಶಿಫಾರಸ್ಸು ಮಾಡಿರುತ್ತಾರೆ. ಈ ಶಕ್ತಿ ದಾಸ್ 2025 ಜೂನ್ ತಿಂಗಳಲ್ಲಿ ಮರು ಅರ್ಜಿ ಸಲ್ಲಿಸಿದಾಗ ಆರೋಪಿ ಪೊಲೀಸ್‌ ಸಿಬ್ಬಂದಿ ಪ್ರದೀಪ್‌ ಅರ್ಜಿದಾರ ವಿಳಾಸದ ಬೀಟ್ ಸಿಬ್ಬಂದಿ ಸಾಬಿ ಮಿರ್ಜಿ ಎಂಬವರ ಹೆಸರಿನಲ್ಲಿ ವರದಿ ತಯಾರಿಸಿ ಪೋರ್ಜರಿ ಸಹಿ ಹಾಕಿ ಮೇಲಾಧಿಕಾರಿಗಳಿಂದ ಶಿಫಾರಸ್ಸು ಮಾಡಿಸಿ ಕಳುಹಿಸಿ ಕೊಟ್ಟಿರುತ್ತಾರೆ. ಈ ಬಗ್ಗೆ ಪರಿಶೀಲನಾ ದಾಖಲೆಗಳನ್ನು ಯಾರಿಗೂ ಗೊತ್ತಾಗಬಾರದೆಂದು ನಾಶಪಡಿಸಿರುತ್ತಾರೆ.ಈ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನು ಡಿ.19 ರಂದು ಪರಿಶೀಲನೆ ಮಾಡುವಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ಈ ಬಗ್ಗೆ ನಕಲಿ ದಾಖಲೆಗಳನ್ನು ನೀಡಿ ಪಾಸ್ ಪೋರ್ಟ್ ಪಡೆದ ಶಂಕಿತ ಬಾಂಗ್ಲಾದೇಶದ ಪ್ರಜೆ ಶಕ್ತಿ ದಾಸ್ ಮತ್ತು ಸಿಬ್ಬಂದಿ ಪ್ರದೀಪ್‌ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಸಾಬು ಮಿರ್ಜಿ ನೀಡಿದ ದೂರಿನ ಮೇರೆಗೆ ಕಲಂ 336,337,316(5), 238 BNS 2023 03 ថថ ದಾಖಲಿಸಲಾಗಿದೆ. ಈ ಪ್ರಕರಣದ ತನಿಖೆ ಮಾಡಿದ ವಿಟ್ಲ ಪೊಲೀಸರು ಆರೋಪಿ ಪೊಲೀಸ್ ಸಿಬ್ಬಂದಿ ಪ್ರದೀಪ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು.ನ್ಯಾಯಾಲಯ ಆರೋಪಿ ಪೇದೆ ಪ್ರದೀಪ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here