
ಬೆಳ್ತಂಗಡಿ; ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಕ್ರಿಸ್ಮಸ್ ಆಚರಣೆ ಡಿಸೆಂಬರ್ 20 ರಂದು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಷ್ಪರಾಜ್ ವಹಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಎ ಜೆ ಪ್ರಾಸ್ತಾವಿಕ ನುಡಿಯನ್ನಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೈಂಟ್ ಮೇರಿ ಚರ್ಚ್ ಇದರ ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ಎಬಿನ್ ಕುರಿಯನ್ ಕ್ರಿಸ್ಮಸ್ ಕೇಕ್ ಕತ್ತರಿಸಿ ಕ್ರಿಸ್ಮಸ್ ಸಂದೇಶ ನೀಡಿದರು. ಸಿಸ್ಟರ್ ಲೀನಾ ಮದರ್
ಸುಪಿರಿಯರ್ ಕುಟ್ರುಪ್ಪಾಡಿ ಕಾನ್ವೆಂಟ್, ಮಾತೃವೇದಿ ಸಂಘಟನೆಯ ಸಂಯೋಜಕರು ಮತ್ತು ಬೆಳ್ತಂಗಡಿ ಧರ್ಮಪ್ರಾಂತ್ಯದ ಪಿ.ಆರ್.ಒ ಹಾಗೂ ಮೀಡಿಯಾ ಅಪೋಸ್ಟೆಲೆಟ್ ಇದರ ನಿರ್ದೇಶಕರಾದ ವಂದನೀಯ ಫಾದರ್ ಮ್ಯಾಥ್ಯೂ ತಾಯೆ
ಕಾಟೀಲ್ ಪೌಷ್ಟಿಕ ಆಹಾರದ ಕಿಟ್ ವಿತರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮಾತೃವೇದಿ ಸಂಘಟನೆಯ ಅಧ್ಯಕ್ಷರು , ಅತಿಥಿ ಗಣ್ಯರು ಹಾಗೂ ಪದಾಧಿಕಾರಿಗಳು ನವಜೀವನ ಆರೈಕೆ ಬೆಂಬಲ ಕೇಂದ್ರದ ಸದಸ್ಯರಿಗೆ ಕ್ರಿಸ್ಮಸ್ ಕೇಕ್ ಮತ್ತು ಧನಸಹಾಯ ನೀಡಿದರು. ಮಾತೃವೇದಿ ಸಂಘಟನೆಯ ಅಧ್ಯಕ್ಷರಾದ
ವಲ್ಸಮ್ಮ ಎ ಜೆ ಇವರು ನವಜೀವನ ಲಕ್ಕಿ ಪರ್ಸನ್ ಆಫ್ ದಿ ಇಯರ್ 2025 ವಿಜೇತರಿಗೆ ಬಹುಮಾನ ವಿತರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಡಿ.ಕೆ.ಆರ್.ಡಿ.ಎಸ್.ಸಂಸ್ಥೆಯ ವಿದ್ಯಾನಿಧಿ ಯೋಜನೆಯ ಸಂಯೋಜಕಿಯಾದ ಜಿನಿ ಪಿಜೆ ಸ್ವಾಗತಿಸಿದರು. ಡಿ.ಕೆ.ಆರ್.ಡಿ.ಎಸ್.ಸಂಸ್ಥೆಯ ಕಾರ್ಯಕರ್ತ ಮಾರ್ಕ್ ಡಿ ಸೋಜ ವಂದಿಸಿದರು. ಯೋಜನೆಯ ಸಂಯೋಜಕಿ ಕುಮಾರಿ ಶ್ರೇಯ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾತು.