
ಶಿವಮೊಗ್ಗ : ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಷಡ್ಯಂತ್ರನಡೆಸಿದ್ದಾನೆ ಎಂದು ಆರೋಪಿಯಾಗಿ ಜೈಲು ಪಾಲಾದ ಚಿನ್ನಯ್ಯ ಕೊನೆಗೂ ಶಿವಮೊಗ್ಗ ಜೈಲಿನಿಂದ ಡಿ.18 ರಂದು ಬೆಳಗ್ಗೆ ಬಿಡುಗಡೆಯಾಗಿದ್ದಾನೆ. ಜೈಲಿನಿಂದ ಮಾಧ್ಯಮಗಳ ಮುಂದೆ ಬರದೆ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನ ಜೊತೆಯಲ್ಲಿ ತೆರಳಿದ್ದಾನೆ.
ಜಾಮೀನು ಸಿಕ್ಕಿದರೂ ನ್ಯಾಯಾಲಯ ಸೂಚಿಸಿದ್ದ ಶೂರಿಟಿ ನೀಡದ ಕಾರಣ ಚಿನ್ನಯ್ಯನಿಗೆ ಜೈಲಿನಿಂದ ಹೊರಬರಲು ಸಾಧ್ಯವಾಗಿರಲಿಲ್ಲ ಇದೀಗ ಬೆಳ್ತಂಗಡಿ ನ್ಯಾಯಾಲಯದಲ್ಲಿ ಡಿ17ರಂದು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿತ್ತು. ಇಂದು ಶಿವಮೊಗ್ಗ ಜೈಲಿನಿಂದ ಚಿನ್ನಯ್ಯ ಬಿಡುಗಡೆಯಾಗಿದ್ದಾನೆ. ಮಾದ್ಯಮಗಳೊಂದಿಗೆ ಮಾತನಾಡಬಾರದು ಎಂಬುದು ಸೇರಿದಂತೆ ಹಲವು ನಿಬಂಧನೆಗಳನ್ನು ನ್ಯಾಯಾಲಯ ಚಿನ್ನಯ್ಯನಿಗೆ ವಿಧಿಸಿದೆ.