
ಬೆಳ್ತಂಗಡಿ: “ಕೊಂದವರು ಯಾರು” ಪ್ರಶ್ನೆಯೊಂದಿಗೆ ವಿವಿಧ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ ಬೆಳ್ತಂಗಡಿಯಲ್ಲಿ ಆರಂಭಗೊಂಡಿತ್ತು.
ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮುಖಂಡೆ ಮಲ್ಲಿಗೆ ಮಾತನಾಡಿ ನ್ಯಾಯ ಕೇಳುವುದು ತಪ್ಪೇ, ಕೊಲೆ ಅತ್ಯಾಚಾರ ನಡೆಸಿದೆ ಆದರೆ ಆರೋಪಿಗಳು ಸಿಗುತ್ತಿಲ್ಲ ಅಂದರೆ ಕೊಂದವರು ಯಾರು ಎಂದು ಪ್ರಶ್ನಿಸಲೇ ಬೇಕಾದ ಅನಿವಾರ್ಯತೆಯಿದೆ ನ್ಯಾಯ ಸಿಗುವ ವರೆಗೂ ಮಹಿಳಾ ಹೋರಾ ನಿರಂತರವಾಗಿ ಮುಂದುವರಿಯುತ್ತದೆ ಎಂದರು.

ಹಿರಿಯ ಮಹಿಳಾ ಪರ ಹೋರಾಟಗಾರ್ತಿ ಜ್ಯೋತಿ ಮಾತನಾಡಿ ವೇದವಲ್ಲಿಯಿಂದ ಇಲ್ಲಿಯ ವರೆಗೆ ಮಹಿಳೆಯರ ಕೊಲೆ ಅತ್ಯಾಚಾರ ದೌರ್ಜನ್ಯ ನಡೆದಿದೆ ಆದರೆ ಯಾರೂ ಅಪರಾಧಿಗಳು ಇನ್ನೂ ಪತ್ತೆಯಾಗಿಲ್ಲ ನಿರ್ಭಯ ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಯಿತು ಇಲ್ಲಿ ಯಾಕೆ ಪತ್ತೆ ಯಾಗುತ್ತಿಲ್ಲ ಎಂದು ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದೇವೆ
ಆರೋಪಿಗಳನ್ನು ಪತ್ತೆಹಚ್ಚುವ ವರೆಗೂ ಈ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಹಿರಿಯ ಸಾಹಿತಿ ರೋಹಿಣಿ ಮಾತನಾಡಿ
ಈ ನೆಲದಲ್ಲಿ ಮಹಿಳೆರ ನೋವಿನ ಅಳು ಕೇಳಿಸುತ್ತಿದೆ ಅವರಿಗೆ ನ್ಯಾಯ ಕೊಡಿಸಲು ಬಂದಿದ್ದೇವೆ ಎಂದರು
ಮಹಿಳಾ ನ್ಯಾಯ ಸಮಾವೇಶದ ಅಂಗವಾಗಿ ಬೆಳ್ತಂಗಡಿ ಮಾರಿಗುಡಿಯಿಂದ ಮಿನಿ ವಿಧಾನ ಸೌಧದ ವರೆಗೆ ನೂರಾರು ಮಹಿಳೆಯರು ಮೌನ ಮೆರವಣಿಗೆ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಹಿಳೆಯರು ಸಮಾವೇಶದಲ್ಲಿ ಭಾಗಿಗಳಾದರು.








