
ಬೆಳ್ತಂಗಡಿ: ಕಳೆಂಜ ಗ್ರಾಮದ ಸರ್ವೇ ನಂಬರ್ 309ರ ಸರ್ವೇ ನಂಬರ್ ನಲ್ಲಿ ನಡೆಯುತ್ತಿರುವ ಸರ್ವೆ ಕಾರ್ಯ ಶಿಶಿಲ ಭಾಗದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದೆ ಈ ವೇಳೆ ಶಿಶಿಲ ಗ್ರಾಮದಲ್ಲಿ ಪಟ್ಟಾ ಜಾಗದಲ್ಲಿ ಅರಣ್ಯ ಇಲಾಖೆ ಸರ್ವೆ ನಡೆಸಲು ಮುಂದಾಗಿದ್ದು ಇದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಈ ಹಿನ್ನಲೆಯಲ್ಲಿ ಸ್ಥಳೀಯರು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಕಳೆಂಜದ 309 ಸರ್ವೆ ಸಂದರ್ಭದಲ್ಲಿ
ಸಂಧರ್ಭದಲ್ಲಿ ಅರಣ್ಯ ಇಲಾಖೆಯ ಸರ್ವೇ ಅಧಿಕಾರಿಗಳು ಅಲ್ಲಿನ ಪಟ್ಟ ಜಮೀನುಗಳನ್ನು ತಮ್ಮದೆಂದು ಸರ್ವೇ ನಡೆಸಿದ್ದಾರೆ. ಇದು ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಇದರಿಂದ ಬೇಸತ್ತ ಅಲ್ಲಿನ ನಿವಾಸಿಗಳು ಉಪ್ಪಿನಂಗಡಿ ಉಪವಲಯಾರಣ್ಯಧಿಕಾರಿಗೆ ದೂರು ನೀಡಿದ್ದು ದೂರಿನ ಪತ್ರದಲ್ಲಿ ಶಿಶಿಲ ಗ್ರಾಮದ ಹೊಳೆಗಂಡಿ, ದೇನೋಡಿ ಭಾಗದಲ್ಲಿ ಅಲ್ಲಿನ 80ಕುಟುಂಬಗಳಿಗೆ 1966ರಲ್ಲಿ ಜಮೀನು ಮಂಜೂರಾಗಿದ್ದು ಅದು ಅರಣ್ಯದಿಂದ ಕಂದಾಯಕ್ಕೆ ವಿಂಗಡಣೆಯಾಗಿರುತ್ತದೆ. ಆದ್ದರಿಂದ ಸರಕಾರ ಮಂಜೂರು ಮಾಡಿ ನೀಡಿರುವ ಭೂಮಿಯನ್ನು ಹೊರತುಪಡಿಸಿ ಅರಣ್ಯ ಇಲಾಖೆ ತಮಗೆ ಸೆರಿರುವ ಅರಣ್ಯ ಭಾಗವನ್ನು ಮಾತ್ರ ಸರ್ವೇ ಮಾಡಬೇಕೆಂಬುದು ಮನವಿ ಸಲ್ಲಿಸಿದ್ದಾರೆ. ಸರಕಾರದಿಂದ ದೇನೋಡಿ ಭಾಗದಲ್ಲಿ ಮಂಜೂರಾಗಿರುವ ಜಮೀನಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ಪ್ರವೇಶ ಮಾಡಿ ಸರ್ವೇ ಮಾಡಿದ್ದು ಆ ಸರ್ವೇ ಕೂಡ ಅಸಮರ್ಪಕವಾಗಿದೆ
ಇನ್ನೂ ಮುಂದಿನ ದಿನಗಳಲ್ಲಿ ಶಿಶಿಲ ಭಾಗದಲ್ಲಿ ಸರಕಾರದಿಂದ ಮಂಜೂರು ಗೊಂಡಿರುವ ಜಾಗವನ್ನು ಯಾವುದೇ ರೀತಿ ಸರ್ವೇ ನಡೆಸದಂತೆ ಆಕ್ಷೇಪಣೆ ಇರುತ್ತದೆ ಎಂದು ಉಪವಲಯಾರಣ್ಯಧಿಕಾರಿಗೆ ನೀಡಿರುವ ಪತ್ರದಲ್ಲಿ ಶಿಶಿಲ ಗ್ರಾಮಸ್ಥರು ಒತ್ತಾಯಿಸಿರುವುದಾಗಿ ತಿಳಿದು ಬಂದಿದೆ
ಈಗಾಗಲೇ ಹಲವಾರು ವಿವಾದಗಳಿಗೆ ಕಾರಣವಾಗಿರು 309ಸರ್ವೆ ನಂಬರ್ ನ ಸರ್ವೆ ಕಾರ್ಯದಲ್ಲಿ ಹೊಸ ವಿವಾದವೊಂದು ಸೃಷ್ಟಿ ಯಾಗಿದೆ.